ಜೂ.16 ರಂದು ವಸತಿ ಸಚಿವರ ಜಿಲ್ಲಾ ಪ್ರವಾಸ


ಮಡಿಕೇರಿ :-ಮಾನ್ಯ ವಸತಿ ಸಚಿವರಾದ ಎನ್.ನಾಗರಾಜ ಎಂ.ಟಿ.ಬಿ ಅವರು ಜೂನ್, 16 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಚಿವರು ಜೂನ್, 16 ರಂದು ಬೆಳಗ್ಗೆ 11 ಗಂಟೆಗೆ ಜಂಬೂರು, ಮಧ್ಯಾಹ್ನ 12.15 ಗಂಟೆಗೆ ಕರ್ಣಂಗೇರಿ ಹಾಗೂ ಮಧ್ಯಾಹ್ನ 1 ಗಂಟೆಗೆ ಮಡಿಕೇರಿ ತಾಲ್ಲೂಕಿನ ಮದೆ ಈ ಗ್ರಾಮಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರಾಶ್ರಿತರಿಗೆ ನಿರ್ಮಿಸಲಾಗುತ್ತಿರುವ ವಸತಿ ಕಾಮಗಾರಿಗಳ ಪರಿವೀಕ್ಷಣೆ ಮಾಡಲಿದ್ದಾರೆ ಎಂದು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಎಂ.ಕೆ.ಜಗದೀಶ್ ಅವರು ತಿಳಿಸಿದ್ದಾರೆ.