ಹೊಸದಿಲ್ಲಿ, ಮೇ.10:ಅಯೋಧ್ಯೆಯ ರಾಮಜನ್ಮಭೂಮಿ -ಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಆಗಸ್ಟ್ 15ಕ್ಕೆ ಮುಂದೂಡಿದೆ.
ಅಯೋಧ್ಯೆಯ ಜಮೀನು ವಿವಾದ ಪ್ರಕರಣದ ಇತ್ಯರ್ಥಕ್ಕೆ ನೇಮಕ ಮಾಡಲಾಗಿದ್ದ ಮಧ್ಯಸ್ಥಿಕೆ ಸಮಿತಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಸುಪ್ರೀಂ ಕೋರ್ಟ್ ನೇತೃತ್ವದ ಸಾಂವಿಧಾನಿಕ ಪೀಠ ಕಾಲಾವಕಾಶ ನೀಡಿದ್ದು, ಆ.15ರ ಒಳಗಾಗಿ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದೇ ವೇಳೆ ಮಧ್ಯಸ್ಥಿಕೆ ಸಮಿತಿ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದೆ.

No comments
Post a Comment