ಮಡಿಕೇರಿ. ಮೇ. 10 - ಪ್ರಕ?ತ್ತಿ ವಿಕೋಪದಿಂದಾಗಿ ಸಂಕಷ್ಟದಲ್ಲಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂಗ್9 ಯೋಜನೆಯಡಿ ಯಶಸ್ವಿ ಹೆಸರಿನಲ್ಲಿ ಪ್ರಾರಂಭಿಸಲಾಗಿದ್ದ ಮಸಾಲೆ ಪದಾಥ9ಗಳ ಉತ್ಪನ್ನಗಳು ಮತ್ತೊಂದು ಮಹತ್ತರ ಘಟ್ಟ ತಲುಪಿದೆ.
ಕಾಲೂರಿನ ಮಹಿಳೆಯರು ಉತ್ಪಾದಿಸಿದ ಮಸಾಲೆ ಪದಾಥ9ಗಳ ಮಾರಾಟಕ್ಕೆ ಇದೀಗ ಸಂಚಾರಿ ವ್ಯಾನ್ ನ ಬೆಂಬಲ ದೊರಕಿದೆ. ಉತ್ತರ ಅಮೇರಿಕಾದಲ್ಲಿರುವ ಕೊಡವ ಕೂಟ ಪ್ರಾಯೋಜಕತ್ವದಲ್ಲಿ ಸಂಬಾರ ಪದಾಥ9ಗಳ ಮಾರಾಟಕ್ಕೆ ಸುಸಜ್ಜಿತ ಸಂಚಾರಿ ವ್ಯಾನ್ ಇದೇ ಮೇ 12 ರಿಂದ ಸಂಚಾರ ಪ್ರಾರಂಭಿಸಲಿದೆ.
ಮೇ 12 ರಂದು ಸಂಜೆ 6.30 ಗಂಟೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನ ಆವರಣದಲ್ಲಿ ಸಂಚಾರಿ ವ್ಯಾನ್ ಲೋಕಾಪ9ಣೆಯಾಗಲಿದೆ ಎಂದು ಯೋಜನೆಯ ಮುಖ್ಯಸ್ಥ ಬಾಲಾಜಿಕಶ್ಯಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಕಾಲೂರು ಮಹಿಳೆಯರು ಉತ್ಪಾದಿಸಿದ ಮಸಾಲೆ ಪದಾಥ9ಗಳನ್ನು ಮಡಿಕೇರಿಯ ರಾಜಾಸೀಟ್ ಉದ್ಯಾನವನದ ಆವರಣ ಹಾಗೂ ಸಕಾ9ರಿ ಬಸ್ ನಿಲ್ದಾಣ ಬಳಿಯ ಶಿಶುಕಲ್ಯಾಣ ಸಂಸ್ಥೆಯ ಮುಂಬದಿಯ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದೀಗ ಸಂಚಾರಿ ಘಟಕದೊಂದಿಗೆ ಕೊಡಗಿನಾದ್ಯಂತ ಈ ಮೊಬೈಲ್ ವಾಹನದ ಮೂಲಕ ಕಾಲೂರು ಮಹಿಳೆಯರ ಉತ್ಪಾದನೆಯ ಮಸಾಲಾ, ಸಂಬಾರ ಪದಾಥ9ಗಳು, ಕೊಡಗಿನ ಕಾಫಿ, ಜೇನುತುಪ್ಪ ಗ್ರಾಹಕರಿಗೆ ಸುಲಭವಾಗಿ ದೊರಕಲಿದೆ. ಶಿಶುಕಲ್ಯಾಣ ಸಂಸ್ಥೆಯ ಮುಂಬದಿಯ ಕಾಲೂರು ಸ್ಟೋರ್ಸ್ ಮಳಿಗೆಯಲ್ಲಿ ಕಾಲೂರು ಗ್ರಾಮಸ್ಥರ ತಯಾರಿಕೆಯ ಕೊಡಗಿನ ಸ್ವಾದಿಷ್ಟ ಫಿಲ್ಟರ್ ಕಾಫಿ ಕೂಡ ದೊರೆಯುತ್ತಿದೆ.
.....

No comments
Post a Comment