ಕನ್ನಡ ರಿಪೋರ್ಟರ್ : (21.05.19) ಇಸ್ಲಾಮ್ ಧರ್ಮವನ್ನು ಪಾಲಿಸುವವರು ರಮಝಾನ್ ತಿಂಗಳಲ್ಲಿ ಅನ್ನಾಹಾರಗಳನ್ನು ತ್ಯಜಿಸಿ ಉಪವಾಸ ವೃತವನ್ನು ಕೈಗೊಳ್ಳುವುದು ವಾಡಿಕೆಯಾಗಿದೆ. ಇಸ್ಲಾಮ್ ಉಪವಾಸವನ್ನು ಅಶಕ್ತರು, ಋತುಮತಿಗಳು, ಬಾಣಂತಿಯರು, ವೃದ್ಧರನ್ನು ಹೊರತುಪಡಿಸಿ ಉಳಿದವರಿಗೆ ಕಡ್ಡಾಯ ಮಾಡಿದೆ. ಈ ಹಿಂದೆ ತಮ್ಮ ವಸ್ತ್ರ ಶೈಲಿಯಿಂದ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ದಂಗಲ್ ನಟಿ ಫಾತಿಮಾ ಸನಾ ಶೈಕ್ ಇದೀಗ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಉದ್ಯಾನವನವೊಂದರಲ್ಲಿ ಕಾಫಿ ಕಪ್ ಅನ್ನು ಕೈಯಲ್ಲಿ ಹಿಡಿದುಕೊಂಡು ಮುಂದುಗಡೆ ತಿಂಡಿಗಳಿರುವ ಪ್ಲೇಟ್ ಗಳೊಂದಿಗೆ ಫೋಟೊವನ್ನು ಶೇರ್ ಮಾಡಿದ್ದಾರೆ. ಶೇರ್ ಮಾಡುವಾಗ, ಈ ಆಹಾರ ನನ್ನದಲ್ಲ ಎಂದು ಕೂಡಾ ಸೇರಿಸಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ಹಲವರು ರಮ್ಝಾನ್ ಆದರೂಬೆಳಗಿನ ತಿಂಡಿ ತಿನ್ನುವ ಫೋಟೊವನ್ನು ಹಾಕಿದ್ದಕ್ಕೆ ಅಸಮಧಾನ ವ್ಯಕ್ತಪಡಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶೇಖ್, ನಿಮಗೆ ಇದರಿಂದ ಸಮಸ್ಯೆಯಾದರೆ ಆನ್ ಲೈನ್ ಗೆ ಬರುವುದನ್ನೇ ನಿಲ್ಲಿಸಿ ಬಿಡಿ ಎಂದು ಖಡಕ್ ಉತ್ತರ ನೀಡಿದ್ದಾರೆ.

No comments
Post a Comment