ತೆಲಂಗಾಣ ಸರಕಾರದಿಂದ ಸರಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಗಿಫ್ಟ್

No comments
ಹೈದರಾಬಾದ್ : ಸರ್ಕಾರಿ ಶಾಲಾ ಮಕ್ಕಳಿಗೆ ತೆಲಂಗಾಣ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪಿಕಪ್ ಮತ್ತು ಡ್ರಾಪ್ ಸೇವೆಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವಂತೆ ಸಿಎಂ ಕೆಸಿಆರ್ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ.
ತೆಲಂಗಾಣದಲ್ಲಿರುವ ಒಟ್ಟು 20,012 ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪಿಕಪ್ ಹಾಗೂ ಡ್ರಾಪ್ ಸೇವೆಯನ್ನು ಜಾರಿಗೆ ತರುವ ಮೂಲಕ ತೆಲಂಗಾಣ ಸರ್ಕಾರ ಇದೀಗ ದೇಶದ ಗಮನ ಸೆಳೆದಿದೆ. ತೆಲಂಗಾಣ ಸಮಗ್ರ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಈ ಮಕ್ಕಳನ್ನನು ವ್ಯಾನ್ ಗಳು ಅಥವಾ ಆಟೋ ರಿಕ್ಷಾ ಮೂಲಕ ಶಾಲೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ತೆಲಂಗಾಣ ಸರ್ಕಾರದ ಈ ಕಾರ್ಯಕ್ರಮದ ಬಗ್ಗೆ ಸರ್ಕಾರಿ ಶಾಲೆ ಮಕ್ಕಳ ಪೋಷಕರು ಸೇರಿದಂತೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ

No comments

Post a Comment