4.9 ಕೋಟಿ ಇನ್ಸ್ಟಾಗ್ರಾಂ ಖಾತೆಗಳ ಮಾಹಿತಿ ಸೋರಿಕೆ

No comments

ಕನ್ನಡ ರಿಪೋರ್ಟರ್ ವರದಿ : ಲಕ್ಷಾಂತರ ಗಣ್ಯ ವ್ಯಕ್ತಿ, ಸೆಲೆಬ್ರೆಟಿ, ಬ್ರಾಂಡ್ ಕಂಪನಿಗಳ ಇನ್ಸ್ಟಾಗ್ರಾಂ ಖಾತೆಗಳ ಮಾಹಿತಿ ಸೋರಿಕೆಯಾಗಿದೆ. ಹಿಂದೆ ಫೇಸ್ಬುಕ್ ಖಾತೆಗಳ ದತ್ತಾಂಶ ಸೋರಿಕೆಯಾಗುತ್ತಿದೆ ಎಂದು ವರದಿಯಾಗಿತ್ತು. ಇನ್ಸ್ಟಾಗ್ರಾಂ ಖಾತೆಗಳ ದತ್ತಾಂಶ ಸೋರಿಕೆಯಾಗಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
49 ದಶಲಕ್ಷ ಇನ್ಸ್ಟಾಗ್ರ್ಯಾಮ್ ಬಳಕೆದಾರರ ದೊಡ್ಡ ಪ್ರಮಾಣ ಡೇಟಾಬೇಸ್ ಬಹಿರಂಗಗೊಂಡಿದೆ. ಮುಂಬೈ ಮೂಲದ ಪ್ರಭಾವಶಾಲಿ ಮಾರ್ಕೆಟಿಂಗ್ ಏಜೆನ್ಸಿ Chtrbox ಎಂಬ ಸಂಸ್ಥೆ ಈ ವಿಷಯವನ್ನು ಪತ್ತೆ ಹಚ್ಚಿದೆ. Chtrbox ಸಂಸ್ಥೆಯ ಗ್ರಾಹಕರಾಗಿರುವ ಬಳಕೆದಾರರ ಸಾರ್ವಜನಿಕ ಮಾಹಿತಿಯನ್ನೂ (ಬಳಕೆದಾರರ ಬಯೋಡಾಟಾ, ಪ್ರೊಫೈಲ್ ಚಿತ್ರ, ಸ್ಥಳ, ಅನುಯಾಯಿಗಳ ಸಂಖ್ಯೆಯನ್ನು ಒಳಗೊಂಡಂತೆ) ಜೊತೆಗೆ ಖಾಸಗಿ ಡೇಟಾವನ್ನು (ಮೊಬೈಲ್ ಸಂಖ್ಯೆಗಳು, ಇಮೇಲ್ ಐಡಿ, ವ್ಯವಹಾರವಾದ ಮೊತ್ತಗಳು) ಒಳಗೊಂಡಿದೆ.ಈ ಸಂಸ್ಥೆಯ ವರದಿ ಪ್ರಕಾರ 4.9 ಕೋಟಿ ಜನರ ಇನ್ಸ್ಟಾಗ್ರಾಂ ಖಾತೆಗಳ ಮಾಹಿತಿ ಲೀಕ್ ಆಗಿದೆ. ಆತಂಕಕಾರಿ ವಿಷಯ ಇದರಲ್ಲಿ ಗಣ್ಯ ವ್ಯಕ್ತಿಗಳ, ಸೆಲೆಬ್‌ಎಟಿಗಳ, ದೊಡ್ಡ ದೊಡ್ಡ ಹೋಟೆಲ್‍, ಪಾನೀಯ ಸಂಸ್ಥೆಗಳ ಇನ್ಸ್ಟಾಗ್ರಾಂ ಖಾತೆಗಳು ಸೋರಿಕೆಯಾಗಿವೆಯಂತೆ.
Chtrbox ಸಂಸ್ಥೆ ಹೇಳುವ ಪ್ರಕಾರ, ಇನ್ಸ್ಟಾಗ್ರಾಂ ಬಳಕೆದಾರರು ಇರುವ ಪ್ರದೇಶ, ಅವರು ಯಾವುದನ್ನು ಹೆಚ್ಚು ಲೈಕ್ ಮಾಡ್ತಾರೆ, ಇಂತಹ ಸಾಕಷ್ಟು ಮಾಹಿತಿಗಳು ಲೀಕ್‍ ಆಗಿದೆ ಎನ್ನಲಾಗಿದೆ. ಇನ್ಸ್ಟಾಗ್ರಾಂ ಫೇಸ್ಬುಕ್ ಒಡೆತನದಲ್ಲಿದ್ದು, ಇದರ ಬಗ್ಗೆ ತನಿಖೆ ನಡೆಸುವುದಾಗಿ ಸಂಸ್ಥೆ ತಿಳಿಸಿದೆ.

No comments

Post a Comment