ಕಾವೇರಿ ನಾಡಿನಲ್ಲಿ ಮಳೆ ಅಭಾವ ಕುಡಿಯುವ ನೀರಿಗೂ ಪರದಾಟ .

No comments

ಭಾಗಮಂಡಲ:ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಈ ಬಾರಿ ಮಳೆಯ್ ಅಭಾವ ಎದುರಾಗಿದ್ದು ಪುಣ್ಯಕ್ಷೇತ್ರಕ್ಕೆ ಈ ಬಿಸಿ ತಟ್ಟಿರುವುದು ವಿಷಾದನೀಯ ಸಂಗತಿ , ಈ ಬಾರಿ ಪ್ರಥಮವಾಗಿ ಶ್ರೀ ಕ್ಷೇತ್ರ

 ಧರ್ಮಸ್ಥಳ ಪ್ರವಾಸ ಕೈಬಿಡಿ ಎಂಬಾ ಮಾತನ್ನು ಕೇಳಿದಾಗಲೇ ನಮಗೆ ನೀರು ಎಷ್ಟು ಅಮೂಲ್ಯ ಎಂಬುದು ಇದರಿಂದ ಮನದಟ್ಟಾಯಿತು , ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರ ತಲಕಾವೇರಿ ಪ್ರವಾಸವನ್ನು ಮುಂದೂಡಿ ಎಂಬಾ ಮಾತು ಬಂದರು ಆಶ್ಚರ್ಯ ಪಡಬೇಕಾಗಿಲ್ಲ , ಏಕೆಂದರೆ ಈ ಬಾರಿ

ಮಳೆಯ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ನಿರಾಶೆಯಾಗಿರುವುದು ಖಚಿತ , ಈ ಭಾಗದ ರೈತರು ಆಕಾಶದತ್ತ ಮುಖ ಮಾಡಿರುವುದು ಅಕ್ಷರಶ ಸತ್ಯ ಸಂಗತಿ , ಹೋಟೆಲ್ , ಲಾಡ್ಜ್ , ಅಂಗಡಿ ಮಾಲೀಕರು ನೀರಿಗಾಗಿ ಪರದಾಡುವಂತಾಗಿದೆ , ಧರ್ಮಸ್ಥಳ ಪ್ರವಾಸ ನಿರ್ಬಂಧ ಹೇರಿದ ಬೆನ್ನಲೇ ಜಿಲ್ಲೆಯತ್ತ ಪ್ರವಾಸ ಮಾಡುತ್ತಿರುವ ಸಾವಿರಾರು ದೇವರ ದರ್ಶನಕ್ಕೆ ಬರುತಿದ್ದು ಇವರಿಗೆ ಅಗತ್ಯ ಬೇಕಾದ ನೀರಿನ ಸೌಲಭ್ಯವನ್ನು ನೀಡಲು ಹೋಟೆಲ್ ಇನ್ನಿತರ ವ್ಯಾಪಾರಸ್ಥರಿಗೂ ಕಷ್ಟವಾಗುತ್ತಿದೆ , ನದಿಯಲ್ಲಿರುವ ಅಲ್ಪ ಸ್ವಲ್ಪ ನೀರನ್ನು ಟ್ಯಾಂಕಿನಲ್ಲಿ ಸಂಗ್ರಹಿಸಿ ಬಂದವರಿಗೆ ಸಮಾಧಾನಪಡಿಸಲು ಮಾಲೀಕರು ಪೂರ್ವತಯಾರಿ ಮಾಡಿಕೊಂಡಿದ್ದಾರೆ , ಇನ್ನೂ ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಶ್ರೀ ಕ್ಷೇತ್ರ ತಲಕಾವೇರಿಯ ಪ್ರವಾಸವನ್ನು ಮುಂದೂಡಿ ಎಂಬಾ ಮಾತು ಬಂದರು ತಪ್ಪೇನಿಲ್ಲ. ವರದಿ:ಲಕ್ಷ್ಮಣ ಭಾಗಮಂಡಲ

No comments

Post a Comment