ಚೆಟ್ಟಳ್ಳಿ : ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA)ಯುಎಇ ಸಮಿತಿ ಆಶ್ರಯದಲ್ಲಿ ಆರು ಜೋಡಿ ಬಡ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ವಿವಾಹ "ಮಹರ್ 2019 ಕಾರ್ಯಕ್ರಮ ಮೂರ್ನಾಡಿನಲ್ಲಿ ನಡೆಯಿತು. ಕೆಎಸ್ ಡಬ್ಲೂ ಯುಎಇ ಸಮಿತಿ ಅಧ್ಯಕ್ಷರಾದ ಅಬುಬಕ್ಕರ್ ಹಾಜಿ ಕೊಟ್ಟಮುಡಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಾಯಕ ಖಾಝಿ ಶೈಖುನಾ ಮಹಮೂದ್ ಮುಸ್ಲಿಯಾರ್ ಎಡಪಾಲ ದುಆ ನೆರವೇರಿಸಿದರು. ಸಮಸ್ತ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ಲ ಪೈಝಿ ಎಡಪಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಸೂಫೀವರ್ಯರಾದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕೂರಿಕುಝಿ ನೇತೃತ್ವದಲ್ಲಿ ನಡೆದ ನಿಖಾಹ್ ಕಾರ್ಯಕ್ರಮದಲ್ಲಿ ಆರು ಜೋಡಿ ನವ ದಂಪತಿಗಳು ನವ ಜೀವನಕ್ಕೆ ಕಾಲಿರಿಸಿದರು. ಖ್ಯಾತ ವಾಗ್ಮಿ ಅಬ್ದುಲ್ ಲತೀಪ್ ಸಅದಿ ಪಯಶ್ವಿ ಮುಖ್ಯ ಭಾಷಣ ಮಾಡಿದರು. ಮಹರ್ ಸ್ವಾಗತ ಸಮಿತಿ ಛೇರ್ಮನ್ ಉಸ್ಮಾನ್ ಹಾಜಿ ನಾಪೋಕ್ಲು ಸ್ವಾಗತಿಸಿ, ಇಸ್ಮಾಯಿಲ್ ಮೂರ್ನಾಡು ಪ್ರಾಸ್ತಾವಿಕ ಭಾಷಣ ನಿರ್ವಹಿಸಿ ವೆಲ್ಫೇರ್ ಸಮಿತಿಯು ಕೊಡಗಿನಲ್ಲಿ ಮಾಡಿದ ಸಾಂತ್ವನ ಕಾರ್ಯಗಳ ವಿವರಣೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಜನಾಬ್ ಲತೀಪ್ ಸುಂಟಿಕೊಪ್ಪ, ಹಿರಿಯ ಸಾಮಾಜಿಕ ಮುಂದಾಳು ಜನಾಬ್ ಖಾಸಿಂ ನಾಪೋಕ್ಲು, ಜನಾಬ್ ಅಬ್ದುಲ್ ರಹಮಾನ್ ನಾಪೋಕ್ಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ರಾಜ್ಯ SSF ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಯಹ್'ಕೂಬ್ ಮಾಸ್ಟರ್ ಕೊಳಕೇರಿ , KSWA ಯುಎಇ ಸಮಿತಿಯ ಮಾಜೀ ಕೋಶಾಧಿಕಾರಿ ಮೊಯ್ದು ಗುಂಡಿಗೆರೆ, ಜನಾಬ್ ಅಲಿ ಪೊನ್ನಂಪೇಟೆ, ಜನಾಬ್ ಮಜೀದ್ ಮೂರ್ನಾಡು ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. SSF ಕೊಡಗು ಜಿಲ್ಲಾ ಅಧ್ಯಕ್ಷರಾದ ಅಝೀಝ್ ಸಖಾಫಿ ಕೊಡ್ಲೀಪೇಟೆ, ಸಯ್ಯದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಇಸ್ಮಾಯಿಲ್ ಸಖಾಪಿ ಕೊಂಡಂಗೇರಿ, ಆಲಿ ಮುಸ್ಲಿಯಾರ್ ಬಹರೈನ್, ಮಹಮ್ಮದ್ ರಪ್ಝಾನ್ (ಖತೀಬ್ ಮುರ್ನಾಡ್), ಇಬ್ರಾಹಿಂ ಪೈಝಿ ಚಾಮಿಯಲ್, ಹಂಝ ಕೊಟ್ಟಮುಡಿ, ಅಮೀನ್ ಮೊಹ್ಸೀನ್ ಮಡಿಕೇರಿ, ಸಲೀಮ್ ಹಾರೀಸ್ ನಾಪೋಕ್ಲು, ಮನ್ಸೂರ್ ಅಲಿ ನಾಪೋಕ್ಲು, ವಝೀರ್ ಮುರ್ನಾಡ್, ಖಾದರ್ ಮುರ್ನಾಡ್, ಸೂಫಿ ಹಾಜಿ ಚೊಕಂಡಳ್ಳಿ, ನಾಸೀರ್ ಮಕ್ಕಿ, ಯೂಸುಫ್ ಹಾಜಿ ಕೊಂಡಂಗೇರಿ, ಮೊಹಿದೀನ್ ಕುಟ್ಟಿ ಹಾಜಿ ಕೊಳಕೇರಿ, ಹಾರೀಸ್ ಕೊಟ್ಟಮುಡಿ ಸೇರಿದಂತೆ ಜಿಲ್ಲೆಯ ಹಲವಾರು ನಾಯಕರುಗಳು ಭಾಗವಹಿಸಿದ್ದರು. ಹಾರೀಸ್ ಮುಸ್ಲಿಯಾರ್ ಕೊಳಕೇರಿ ಹಾಗೂ ನಾಸರ್ ನಈಮಿ ಕೊಳಕೇರಿ ಕಾರ್ಯಕ್ರಮವನ್ನು ನಿರೂಪಿಸಿ ಮಹರ್ ಸಮಿತಿ ಹಣಕಾಸು ನಿರ್ವಾಹಕರಾದ ಅರಾಫತ್ ನಾಪೋಕ್ಲು ಸರ್ವರನ್ನು ವಂದಿಸಿದರು.
ಕೊಡಗು ವೆಲ್ಫೇರ್ ಯುಎಇ ಸಮಿತಿ ವತಿಯಿಂದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ* .

No comments
Post a Comment