ಶುಂಠಿಕೊಪ್ಪ,: ಭಾರತೀಯ ಅನಿವಾಸಿಗಳ ಸಂಘವಾದ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ವತಿಯಿಂದ ಕೊಡಗಿನ ಬಡ ಮುಸ್ಲಿಂ ಕುಟುಂಬಗಳಿಗೆ ಉಚಿತ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮವು ಭಾನುವಾರ ಶುಂಠಿಕೊಪ್ಪದ ಖತೀಜುಮ್ಮಾ ಮದ್ರಸದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಕೊಡಗಿನ ಬಡವರ ಬೆಳಕು ವೇದಿಕೆಯ ರಾಜ್ಯಾಧ್ಯಕ್ಷ ಎಂ.ಹೆಚ್.ಮುಹಮ್ಮದ್, ಎಮ್.ಜಿ.ಎ ಸಂಘದ ವತಿಯಿಂದ ಕೊಡಗಿನ ೨೫೦ ಕುಟುಂಬಗಳಿಗೆ ಉಚಿತ
ರಮಳಾನ್ ಕಿಟ್ ವಿತರಿಸಲಾಯಿತು. ಅದೇ ರೀತಿ ಕೊಡಗಿನ ಬಡವರ ಬೆಳಕು ವೇದಿಕೆ ವತಿಯಿಂದ ನೆರೆಯಿಂದ ನೊಂದ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಡುತ್ತಿದ್ದೇವೆ. ಎರಡೂ ಕಿಡ್ನಿಯನ್ನು ಕಳೆದುಕೊಂಡು ನರಕಯಾತನೆಯನ್ನು ಪಡುತ್ತಿರುವ ಕುಟುಂಬಕ್ಕೆ ನಮ್ಮ ವೇದಿಕೆಯ ವತಿಯಿಂದ ೭೫ ಸಾವಿರ ರೂಗಳನ್ನು ನೀಡಿ ನೆರವಾಗಿದ್ದೇವೆ. ನಮ್ಮ ಸಂಘಕ್ಕೆ ಹಲವು ದಾನಿಗಳು ಸಹಕರಿಸಿದ್ದು, ಮುಂದೆಯೂ ಕೂಡ ಸಹಕಾರವನ್ನು ನೀಡಬೇಕು ಎಂದು ಕೋರಿದರು. ನಂತರ ಮಾತನಾಡಿದ ಸಿ.ಎಂ.ಹಮೀದ್ ಉಸ್ತಾದ್, ನಮ್ಮ ಕೊಡಗು ತಂಡ, ಯೂತ್ ಫಾರ್ ಜಸ್ಟಿಸ್, ಕೊಡಗಿನ ಬಡವರ ಬೆಳಕು ಎಂಬ ಸಂಘಟನೆಗಳು ಹಲವು ಸಮಾಜಮುಖಿ ಕೆಲಸಗಳನ್ನು ನಡೆಸುತ್ತಾ ಬಂದಿದೆ. ಇದೀಗ ಎಮ್.ಜಿ.ಎ ಸಂಘದ ವತಿಯಿಂದ ಬಡ ಮುಸ್ಲಿಂ ಸಮುದಾಯಕ್ಕೆ ಉಚಿತ ರಮಳಾನ್ ಕಿಟ್ ಗಳನ್ನು ನೀಡುತ್ತಿರುವುದು ಶ್ಲಾಘನೀಯ. ಯುವಕರ ಈ ಶ್ರಮಕ್ಕೆ ದೇವರು ಒಳಿತು ಮಾಡುವುದರ ಜೊತೆಗೆ ಮುಂದೆಯೂ ಇದೇ ರೀತಿ ಸಮಾಜಸೇವೆ ಮಾಡಲು ಕರುಣಿಸಲಿ ಎಂದರು. ನಮ್ಮ ಕೊಡಗು ತಂಡದ ಸಂಸ್ಥಾಪಕಾಧ್ಯಕ್ಷ ಎಂ.ಆರ್.ನೌಶಾದ್ ಜನ್ನತ್ ಮಾತನಾಡಿ, ಕೊಡಗಿನ ೨೫೦ ಬಡ ಮುಸ್ಲಿಂ ಸಮುದಾಯನ್ನು ಗುರುತಿಸಿ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ವತಿಯಿಂದ ರಮಳಾನ್ ಕಿಟ್ಟನ್ನು ನೀಡುತ್ತಿದ್ದೇವೆ. ನಮ್ಮ ಕೊಡಗು ತಂಡ, ಕೊಡಗಿನ ಬಡವರ ವೇದಿಕೆ, ಯೂತ್ ಫಾರ್ ಜಸ್ಟೀಸ್ ಸಂಘಟನೆಯು ಕೊಡಗಿನ ಬಡ ಕುಟುಂಬಗಳಿಗೆ ನೆರವಾಗುತ್ತಾ ಬಂದಿದ್ದು, ಇದರಲ್ಲಿ ಕೊಡಗಿನ ಹಲವಾರು ಯುವಕರು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಸಾರ್ವಜನಿಕರು ತಮ್ಮ ಕೆಲಸವನ್ನು ಶ್ಲಾಘಿಸಿ ತನು, ಮನ, ಧನವನ್ನು ನೀಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ೨೫೦ ರಮಳಾನ್ ಕಿಟ್ಟನ್ನು ಕೊಡಗಿನ ೩೦ ಗ್ರಾಮಗಳ ಕಮಿಟಿಯ ಪ್ರಮುಖರಿಗೆ ವಿತರಿಸಿ ಆಯಾ ಭಾಗದ ಬಡ ಕುಟುಂಬಗಳಿಗೆ ತಲುಪಿಸುವ ಜವಾಬ್ದಾರಿಯನ್ನು ನೀಡಲಾಯಿತು. ಈ ಸಂದರ್ಭ ರಮಳಾನ್ ಕಿಟ್ ವಿತರರಣೆಗೆ ಧನ ಸಹಾಯ ಮಾಡಿದ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ನ ಭಾರತೀಯ ಅನಿವಾಸಿಗಳಿಗೆ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಗುರುಗಳಾದ ಮಜೀದ್, ಅಶ್ರಫ್, ಹಸಂಗುಂಜ್ಞಿ ಹಾಜಿ ನಮ್ಮ ಕೊಡಗು ತಂಡದ ಖಜಾಂಜಿ ಲೋಹಿತ್, ಕೊಡಗಿನ ಬಡವರ ಬೆಳಕು ವೇದಿಕೆಯ ಸೆಕ್ರಟ್ರಿ ಜಿನ್ಹಾಸುದ್ದೀನ್, ಬಷೀರ್ ಬಾಳುಂಡ, ಷರೀಫ್ ಕರ್ನಾಟಕ ಸಾಮಿಲ್, ರೋಷನ್, ರಫೀಕ್, ಅತೀಕ್, ಮಜೀದ್ ಚೋಕನಳ್ಳಿ, ಪತ್ತಾಕ್ ಕಡಂಗ, ಜಲೀಲ್ ಅಮ್ಮತ್ತಿ, ರಫೀಕ್ ವಿರಾಜಪೇಟೆ ಹಾಗೂ ಕೊಡಗಿನ ೩೦ ಗ್ರಾಮಗಳ ಕಮಿಟಿ ಪ್ರಮುಖರು ಹಾಜರಿದ್ದರು.


No comments
Post a Comment