ಅಜಾದ್ ಬಾಯ್ಸ್ ತಂಡಕ್ಕೆ ಸಾಗರ್ ಕಪ್

No comments

ಅಜಾದ್ ಬಾಯ್ಸ್  ತಂಡಕ್ಕೆ ಸಾಗರ್ ಕಪ್
ಎಂ ಎಚ್ ಬಾಯ್ಸ್ ತಂಡ  ರನ್ನರ್ಸ್
ಚೆನ್ನಯ್ಯನಕೋಟೆಯಲ್ಲಿ  ಸಾಗರ್ ಕ್ರಿಕೆಟ್ ಸಮಾರೋಪ
ಸಿದ್ದಾಪುರ :  ಚೆನ್ನಯ್ಯನಕೋಟೆ ಗ್ರಾಮದ ಸಾಗರ್ ಯೂತ್ಸ್ ಆಟ್ರ್ಸ್ & ಸ್ಪೋಟ್ರ್ಸ್ ಕ್ಲಬ್ ನ 14 ನೇ ವಾರ್ಷಿಕೋತ್ಸವ ಅಂಗವಾಗಿ ಶಾಲಾ ಮೈದಾನದಲ್ಲಿ  ನಡೆದ ರಾಜ್ಯ ಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾಟದಲ್ಲಿ 

ಒಳಮಾಳ ಅಜಾದ್ ಬಾಯ್ಸ್ ತಂಡ ಸಾಗರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ
ಅಂತಿಮ ರೋಮಾಂಚನಕಾರಿ ಪಂದ್ಯದಲ್ಲಿ
ಎಂ ಎಚ್ ಹುಂಡಿ ಬಾಯ್ಸ್ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡ ತಂಡಗಳಿಗೆ ನಗದು ಪ್ರಶಸ್ತಿಯೊಂದಿಗೆ ಬಹುಮಾನ ನೀಡಲಾಯಿತು
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿವಿಧ 

ಕ್ಷೇತ್ರದಲ್ಲಿ ಸಾಧನೆಗೈದ ಪ್ರತಾಪ್ ಮುತ್ತಣ್ಣ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಹಾಗೂ ಜಹೀರ್ ಅವರನ್ನ  ಸನ್ಮಾನಿಸಲಾಯಿತು 
ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ 20 ಕ್ಕೊ ಹೆಚ್ಚು  ವಿದ್ಯಾರ್ಥಿಗಳನ್ನು ಗೌರವಿಸಲಾಯಿತು
ಸಾಗರ್ ಫ್ರೆಂಡ್ಸ್ ಯುವಕ ಸಂಘದ ಅಧ್ಯಕ್ಷ ಎಂ. ಎ  ಉರೈಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಉದಯ .ಶಾಲಾ ಮುಖ್ಯ ಶಿಕ್ಷಕಿ ರೋಸಿ ರಾಣಿ ಎಸ್ಡಿಎಂಸಿ ಅಧ್ಯಕ್ಷ ದಿನೇಶ್, ಹಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಜೇಶ್,
ಪ್ರಮುಖರಾದ  ಸುಬೇರ್ ,ವಿಜೇಶ್ ,ಸಮೀರ್, ಮಣಿ, ಮುನೀರ್, ಜಾನ್ಸನ್,  ಭರತ್,ಸಾಗರ್ ಕ್ರೀಡಾ ಸಂಚಾಲಕ   ರದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

No comments

Post a Comment