ರಾಹುಲ್ ಗಾಂಧಿ ಪೌರತ್ವ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

No comments

ಹೊಸದಿಲ್ಲಿ,ಮೇ 9: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಪೌರತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸಿಜೆಐ ರಂಜನ್ ಗೊಗೊಯ್ ಅಧ್ಯಕ್ಷತೆಯ ಪೀಠ ಪ್ರಕರಣವನ್ನು ತಳ್ಳಿಹಾಕಿತು.
ಪೌರತ್ವ ವಿಚಾರಕ್ಕೆ ಸಂಬಂಧಿಸಿ ವಿವರಣೆ ಕೇಳಿ ಗೃಹಸಚಿವಾಲಯ ರಾಹುಲ್ ಗಾಂಧಿಗೆ ನೋಟಿಸು ಕಳುಹಿಸಿತ್ತು. ಈ ಬಗ್ಗೆ 2017ರಲ್ಲಿಯೂ ಸುಬ್ರಮಣಿಯನ್ ಸ್ವಾಮಿ ರಾಹುಲ್ ವಿರುದ್ಧ ದೂರು ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಸ್ಪರ್ಧಿಸದಂತೆ ತಡೆಯಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಅರ್ಜಿಯಲ್ಲಿ ಸ್ವಾಮಿ ವಾದಿಸಿದ್ದರು.

No comments

Post a Comment