ರೋಡ್ ಶೋ ವೇಳೆ ಪೊಲೀಸರಿಗೆ `ಕೇಸರಿ ಶಾಲು' ಹಾಕಿಸಿದ ಕಾಂಗ್ರೆಸ್ ಅಭ್ಯರ್ಥಿ!

No comments

ಭೋಪಾಲ್ : ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ನಡೆಸಿದ ರೋಡ್ ಶೋ ವೇಳೆ ಭದ್ರತೆಗೆ ನಿಯೋಜಿತರಾಗಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕೇಸರಿ ಶಾಲು ಹಾಕಿಸಿರುವ ಘಟನೆ ನಡೆದಿದೆ.
ಈ ಕುರಿತಾದ ರೋಡ್ ಶೋ ವಿಡಿಯೋ ವೈರಲ್ ಆಗಿದ್ದು, ಹಿಂದು ಮತಗಳನ್ನು ಸೆಳೆಯಲು ಕೇಸರಿ ಶಾಲುಗಳನ್ನು ದಿಗ್ವಿಜಯ್ ಸಿಂಗ್ ಹಂಚಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರನ್ನು ರೋಡ್ ಶೋ ಭಾಗವಹಿಸಲು ಯತ್ನಿಸಿದ ದಿಗ್ವಿಜಯ್ ಸಿಂಗ್ ವಿರುದ್ಧ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ವಕ್ತಾ ರಜನೀಶ್ ಅಗರ್ ವಾಲ್ ಒತ್ತಾಯಿಸಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಭೋಪಾಲ್ ಡಿಐಜಿ ಇರ್ಷಾದ್ ವಾಲಿ, ವಿಡಿಯೋದಲ್ಲಿನ ಮಹಿಳೆಯರು ಪೊಲೀಸ್ ಸಿಬ್ಬಂದಿಯಲ್ಲ, ಪೊಲೀಸರೊಂದಿಗೆ ಸ್ವಯಂ ಸೇವಕರಾಗಿ ಭದ್ರತಾ ನಿರ್ವಹಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ.

No comments

Post a Comment