ಬೆಂಗಳೂರು:ಬುಲೆಟ್, ಅವೆಂಜರ್ ಸೇರಿದಂತೆ ದುಬಾರಿ ಮೌಲ್ಯದ ಬೈಕ್‌ಗಳನ್ನೇ ಕದಿಯುತ್ತಿದ್ದ ಈ ಬಿ.ಕಾಂ ಪದವೀಧರರು, ಕೇವಲ ₹ 10 ಸಾವಿರಕ್ಕೆ ಒಂದರಂತೆ ಬೈಕ್ ಮಾರುತ್ತಿದ್ದರು. ಆ ಹಣದಲ್ಲೇ ಡ್ರಗ್ಸ್ ಹಾಗೂ ಮದ್ಯ ಖರೀದಿಸಿ ನಶೆಯಲ್ಲಿ ತೇಲಾಡುತ್ತಿದ್ದರು. ಇದೀಗ ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಇಬ್ಬರಿಗೂ ಜೈಲಿನ ದಾರಿ ತೋರಿಸಿದೆ.
'ತಿಲಕ್‌ನಗರದ ಮೊಹಮದ್ ನಿಹಾಲ್ (26) ಹಾಗೂ ಜಯನಗರ 1ನೇ ಬ್ಲಾಕ್‌ನ ಮೊಹಮದ್ ಇಸಾಕ್ (31) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳು ತಿಲಕ್‌ನಗರ, ಕಮರ್ಷಿಯಲ್ ಸ್ಟ್ರೀಟ್, ವಿಲ್ಸನ್ ಗಾರ್ಡನ್, ಹುಳಿಮಾವು, ಕಬ್ಬನ್‌ಪಾರ್ಕ್, ಬ್ಯಾಟರಾಯನಪುರ, ಅಶೋಕನಗರ ಹಾಗೂ ಸುದ್ದಗುಂಟೆಪಾಳ್ಯ ಠಾಣೆಗಳ ವ್ಯಾಪ್ತಿಯಲ್ಲಿ 14 ಬೈಕ್‌ಗಳನ್ನು ಕಳವು ಮಾಡಿದ್ದರು. ಅಷ್ಟೂ ವಾಹನಗಳನ್ನು ಜಪ್ತಿ ಮಾಡಿದ್ದೇವೆ' ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

No comments
Post a Comment