ಪತ್ರಿಕಾ ಪ್ರಕಟಣೆಗಾಗಿ
ಜಿಲ್ಲಾ ಪತ್ರಕರ್ತರ ಸಂಘದಿಂದ ಕ್ರಿಕೆಟ್ ಪಂದ್ಯಾವಳಿ
ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ.ಮೇ 12 ರ ಭಾನುವಾದಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಪಂದ್ಯಾವಳಿ ನಡೆಯಲ್ಲಿದ್ದು ಜಿಲ್ಲೆಯ ಪತ್ರಕರ್ತರ ಒಟ್ಟು ನಾಲ್ಕು ತಂಡಗಳು ಪಾಲ್ಗೊಳ್ಳಲ್ಲಿವೆ.ಮಡಿಕೇರಿಯ ಪ್ರಿಂಟ್ ಪಂಟರ್ಸ್,ಮೀಡಿಯಾ ಇಲೆವೆನ್ ವೀರಾಜಪೇಟೆಯ ಸೌತ್ ಟೈಗರ್ಸ್ ಹಾಗೂ ಸೋಮವಾರಪೇಟೆ ಪ್ರೆಸ್ ತಂಡಗಳು ಭಾಗವಹಿಸಲ್ಲಿವೆ.ಮೇ 12 ರ ಬೆಳಿಗ್ಗೆ 8.30 ಗಂಟೆಗೆ ಸರಿಯಾಗಿ ಪಂದ್ಯ ಆರಂಭವಾಗಲ್ಲಿದ್ದು ಆಟಗಾರರಿಗೆ ಪತ್ರಕರ್ತರ ಸಂಘದ ಸದಸ್ಯತ್ವದ ಗುರುತಿನ ಚೀಟಿ ಕಡ್ಡಾಯವಾಗಿದೆ.ಪಂದ್ಯದ ವೇಳೆ ಯಾವುದೇ ಸಮಸ್ಯೆಗಳಿದ್ದರೂ ನಾಯಕನಿಗೆ ಮಾತ್ರ ಚರ್ಚಿಸಲು ಅವಕಾಶವಿದೆ.ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.ನಿಗದಿತ ಸಮಯಕ್ಕೆ ಎಲ್ಲಾ ತಂಡದ ಆಟಗಾರರು ಹಾಜರಿರಬೇಕೆಂದು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments
Post a Comment