ಕಲಬುರ್ಗಿ : ಪ್ರಧಾನಿ ಮೋದಿ ಅವರ ಹುಟ್ಟುಗುಣವೇ ಸುಳ್ಳು ಹೇಳುವುದು. ದೇಶಕ್ಕಾಗಿ ಹುತಾತ್ಮರಾದ ರಾಜೀವ್ ಗಾಂಧಿ ಬಗ್ಗೆ ಈ ರೀತಿಯಾಗಿ ಮಾತನಾಡುವದು ಸರಿಯಲ್ಲ. ಮೋದಿಗೆ ಹೃದಯವೂ ಇಲ್ಲ. ದೇಶ ಪ್ರೇಮವೂ ಇಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ರಾಜೀವ್ ಗಾಂಧಿ ನಂಬರ್ 1 ಭ್ರಷ್ಟನಾಗಿ ಸಾವನ್ನಪ್ಪಿದ್ದಾರೆ ಎನ್ನುವ ಮೋದಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ರಾಜೀವ್ ಗಾಂಧಿ ನಂಬರ್ 1 ಭ್ರಷ್ಟನಾಗಿ ಸಾವನ್ನಪ್ಪಿದ್ದಾರೆ ಎನ್ನುವ ಮೋದಿ
ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಮೋದಿಗೆ ಯಾವ ವಿಚಾರ ಮಾತನಾಡಬೇಕು ಎನ್ನುವ ಪ್ರಜ್ಞೆಯೂ ಇಲ್ಲ. ಇಂಥವರು ನಮ್ಮ ದೇಶದ ಪ್ರಧಾನಿಯಾಗಿ ಇರುವುದು ದೇಶದ ಜನರ ದುರ್ದೈವವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಮೋದಿಗೆ ರಾಜಕೀಯ ಜ್ಞಾನವೂ ಇಲ್ಲ. ಆರ್ಥಿಕ ಜ್ಞಾನವೂ ಇಲ್ಲ. ಚಿಕ್ಕಂದಿನಿಂದಲೇ ಮನೆ ಬಿಟ್ಟಿರುವುದರಿಂದ ಮನೆ ಸಂಸ್ಕಾರವೂ ಇಲ್ಲ. ಅಮೇಥಿ, ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಗೆದ್ದರೆ ಮೋದಿ ತಮ್ಮ ಎಂಪಿ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಎಂದು ಬಹಿರಂಗ ಸವಾಲು ಹಾಕಿದರು.


No comments
Post a Comment