ನಾಮಪತ್ರ ತಿರಸ್ಕಾರ ಪ್ರಕರಣ : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಾಜಿ ಸೈನಿಕ

No comments

ನವದೆಹಲಿ : ಸೇನೆಯಿಂದ ಅಮಾನತಾಗಿದ್ದ ಬಿಎಸ್‌ಎಫ್ ಜವಾನ ತೇಜ್‌ ಬಹಾದ್ದೂರ್‌ ಯಾದವ್‌ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ತನ್ನ ನಾಮಪತ್ರವನ್ನು ಚುನಾವಣಾ ಆಯೋಗ ರದ್ದು ಪಡಿಸಿದ ನಿರ್ಧಾರವನ್ನು ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದಾರೆ.
ಸೇನೆಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ತಾನೇ ಮಾಡಿಕೊಂಡಿದ್ದ ವಿಡಿಯೋ ಚಿತ್ರಿಕೆಯನ್ನು ಸಾಮಾಜಿಕ ಜಾಲ ತಾಣಕ್ಕೆ ಹಾಕಿದ್ದ ಯಾದವ್‌ ಅವರು 2017 ರಲ್ಲಿ ಸೇನೆಯ ಶಿಸ್ತು ಕ್ರಮದಿಂದ ಅಮಾನತಾಗಿದ್ದರು.ವಾರದ ಹಿಂದಿನ ದಿಢೀರ್‌ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷ ಯಾದವ್‌ ಗೆ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡಿತ್ತು. ಆದರೆ ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು.

No comments

Post a Comment