ಮಧ್ಯಪ್ರದೇಶ: ಇಲ್ಲಿನ ಚತಾರ್ಪುರದಲ್ಲಿ ವ್ಯಕ್ತಿಯೊಬ್ಬ ತಂದೆಯ ಸಾವಿನಲ್ಲೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಮತದಾನ ಮಾಡದೇ ಟ್ರಿಪ್ ಮಾಡೋರು, ಸುಮ್ಮನೆ ಇರೋರನ್ನು ನಾವು ನೋಡಿದ್ದೇವೆ. ಆದರೆ, ಚತಾರ್ಪುರದ ಈ ವ್ಯಕ್ತಿ ತನ್ನ ತಂದೆಯನ್ನ ಕಳೆದುಕೊಂಡ ದುಖಃದಲ್ಲೂ ಮತದಾನ ಮಾಡಿ ಜವಾಬ್ಧಾರಿ ತೋರಿದ್ದಾರೆ.
ಅಂತ್ಯಸಂಸ್ಕಾರ ಮುಗಿಸಿಕೊಂಡು ನೇರವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ. ಒಟ್ಟು 7 ರಾಜ್ಯಗಳ 51 ಲೊಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಇಂದು 674 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

No comments
Post a Comment