ಕನ್ನಡ ರಿಪೋರ್ಟರ್ : ಕುಂದಗೋಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ,. ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರೆ ಆದ್ರೆ ಏನ್ಮಾಡ್ತೀಯಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದರು.
ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಯಿಂದ ಈಶ್ವರಪ್ಪ ತಮ್ಮ ಅಮಾನವೀಯ ಮುಖವನ್ನು ಹೊರ ಹಾಕಿದ್ದಾರೆ. ಮಾನಸಿಕ ಸ್ಥಿಮಿತತೆ ಕಳೆದಕೊಂಡ ವ್ಯಕ್ತಿ ಮಾತ್ರ ಶಾಲೆಗೆ ಹೋಗುವ ಬಾಲಕಿಯೊಬ್ಬಳ ಬಗ್ಗೆ ಇಂಥಹ ಹೇಳಿಕೆ ಕೊಡಲು ಸಾಧ್ಯ, ಶಾಶ್ವತವಾಗಿ ಈಶ್ವರಪ್ಪ ಅವರನ್ನು ಲಾಕ್ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

No comments
Post a Comment