ವರ್ಕ್ ಶಾಪ್ ಮಾಲೀಕರ ಸಂಘಸ ವಾರ್ಷಿಕ ಮಹಾಸಭೆ

No comments

ಸುಂಟಿಕೊಪ್ಪ,ಮೇ.08:
ವರ್ಕ್ ಶಾಪ್  ಮಾಲಿಕರ ಸಂಘದ ವಾರ್ಷಿಕ ಮಹಾಸಭೆಯು ಮನು ಕಾಂಪ್ಲೆಕ್ಸ್‍ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವಿ.ಎ.ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೂತನ ಅಧ್ಯಕ್ಷರನ್ನಾಗಿ ವಿ.ಎ.ಸಂತೋಷ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾದ್ಯಕ್ಷರಾಗಿ ಅನೀಷ್, ಪ್ರದಾನ ಕಾರ್ಯದರ್ಶಿಯಾಗಿ ಬಿ.ಎಸ್.ರಮೇಶ್, ಉಪಕಾರ್ಯ ದರ್ಶಿಯಾಗಿ ಹೂವೇಗೌಡ, ಖಜಾಂಚಿಯಾಗಿ ಕೆ.ಪಿ.ವಿನೋದ್, ಸಂಘಟಣಾ ಕಾರ್ಯದರ್ಶಿಯಾಗಿ ಚಿನ್ನತಂಬಿ, ನಿರ್ಧೆಶಕರಾಗಿ ಪಿ.ಆರ್.ಸುನೀಲ್ ಕುಮಾರ್, ಆರ್.ಸತೀಶ್, ರಸಾಕ್, ಮಣಿಕಂಠ, ಕೆ.ಜಿ.ಸತೀಶ್ ಉದಯ ಕುಮಾರ್, ಕೆ.ಸತೀಶ್ ಆಯ್ಕೆಯಾದರು. ನಂತರ ಮಾತನಾಡಿದ ನೂತನ ಅಧ್ಯಕ್ಷ ವಿ.ಎ.ಸಂತೋಷ್ ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಸಂಘವು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸದೆ. ಎಲ್ಲಾ ಸದಸ್ಯರಿಂದ ಸಂಗ್ರಹ ಮಾಡಿದ ಹಣ ಸಂಘದಲ್ಲಿ ಉಳಿತಾಯವಾಗಿದೆ.  ಸಂಘ ಅಬಿವೃದ್ದಿ ಆಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸ ಬೇಕು. ಅಲ್ಲದೆ ವಾಹನಗಳ ಇಂಜಿನ್ ಮತ್ತು ಚಾಸೀಸ್ ಬದಲಾವಣೆ ಮಾಡುವ ಸಂದರ್ಭ ಖಡ್ಡಾಯವಾಗಿ ಸಾರಿಗೆ ಅಧಿಕಾರಿಗಳ ನೊಂದಾವಣೆ(ಅನುಮತಿ ಪತ್ರ) ಇರÀಬೇಕು ಎಂದರು. ಎಲ್ಲವು ಕಾನೂನು ರೀತಿಯಲ್ಲಿ ನಡೆದರೆ ಒಳ್ಳೆಯದು ಪ್ರತಿಯೊಂದು ವರ್ಕ್‍ಶಾಪ್ಗಳ ಮಾಲಿಕರು ಸ್ವಚ್ಚತೆಯನ್ನು ಕಾಪಾಡುವಂತೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

No comments

Post a Comment