ಬೆಂಗಳೂರು, ಮೇ 8: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧ ಕಲ್ಪಿಸಿ ನಟಿ, ಕಾಂಗ್ರೆಸ್ ನಾಯಕಿ ದಿವ್ಯಾ ಸ್ಪಂದನಾ (ರಮ್ಯಾ) ಬಗ್ಗೆ ತಪ್ಪು ವರದಿ ಪ್ರಕಟಿಸಿ ಏಷ್ಯಾನೆಟ್ ನ್ಯೂಸ್ ನೆಟ್ ವರ್ಕ್ ಮತ್ತು ಸುವರ್ಣ ನ್ಯೂಸ್ ಮಾನಹಾನಿಗೈದಿದೆ ಎಂದು ಬೆಂಗಳೂರಿನ ನ್ಯಾಯಾಲಯವೊಂದು ತೀರ್ಪು ನೀಡಿದೆ. ಈ ಸಂಬಂಧ ದಿವ್ಯಾ ಸ್ಪಂದನಾ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರ ಮೇಲೆ ಶಾಶ್ವತ ನಿಷೇಧ ತಡೆಯಾಜ್ಞೆ ವಿಧಿಸುವಂತೆ ರಮ್ಯಾ ಸಲ್ಲಿಸಿದ್ದ ಅಪೀಲನ್ನು ಕೋರ್ಟ್ ಸ್ವೀಕರಿಸಿದೆ.

No comments
Post a Comment