ಮೈತ್ರಿ ಕೋಟೆಯನ್ನು ಛಿಧ್ರ ಮಾಡಿ ಮತ್ತೊಮ್ಮೆ ಗೆಲುವು ಸಾಧಿಸಿದ ಪ್ರತಾಪ್ ಸಿಂಹ

No comments


೧,೩೮,೬೪೭ ಮತಗಳ ಅಂತರದಿಂದ ಗೆಲುವು*
 *ಕೆ.ಎಂ ಇಸ್ಮಾಯಿಲ್ ಕಂಡಕರೆ*
 ಮಡಿಕೇರಿ: ತೀವ್ರ ಕುತೂಹಲ‌ ಕೆರಳಿಸಿದ್ದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ‌‌ ಬಿಜೆಪಿ‌ ಅಭ್ಯರ್ಥಿ ಪ್ರತಾಪಸಿಂಹ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸಿ.ಹೆಚ್.ವಿಜಯಶಂಕರ್ ವಿರುದ್ಧ ಭರ್ಜರಿ ಜಯಸಾಧಿಸಿ 2ನೇ ಬಾರಿಗೆ ಪುನರಾಯ್ಕೆಯಾದರು. ಕಳೆದ ಬಾರಿ ಅಚ್ಚರಿ‌ ರೀತಿಯಲ್ಲಿ ಗೆಲುವು ಸಾಧಿಸಿದ್ದ ಪ್ರತಾಪಸಿಂಹ ಈ ಬಾರಿ ನಿರೀಕ್ಷೆಗೂ ಮೀರಿ ಮತಗಳನ್ನು ಪಡೆದು ಗೆಲುವಿನ‌ ನಗೆ ಬೀರಿದರು. 8 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 688974 ಮತಗಳನ್ನು‌ ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ವಿರುದ್ಧ 138647 ಮತಗಳ‌ ಅಂತರದಿಂದ ಗೆಲುವು ಸಾಧಿಸಿದರು. ವಿಜಯಶಂಕರ್ 550327 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಪಡುವಾರಹಳ್ಳಿಯ‌ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಕಲಾ‌ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂನಲ್ಲಿರಿಸಿದ್ದ ಮತಯಂತ್ರಗಳನ್ನು ಬೆಳಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ, ಚುನಾವಣಾಧಿಕಾರಿಗಳು‌ ಪಕ್ಷದ ಏಜೆಂಟರ ಸಮ್ಮುಖದಲ್ಲಿ ತೆರೆಯಲಾಯಿತು. ಬಳಿಕ ಇವಿಎಂ ಯಂತ್ರಗಳನ್ನು ಎಣಿಕೆ ಕೊಠಡಿಗಳಿಗೆ ಕೊಂಡೊಯ್ಯಲಾಯಿತು. 5ರಲ್ಲಿ ಸಿಂಹ‌ 3ರಲ್ಲಿ‌ ವಿಜಯಶಂಕರ್ ಮುನ್ನಡೆ: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಲ್ಲಿ ಪ್ರತಾಪಸಿಂಹ ಮುನ್ನಡೆ ಸಾಧಿಸಿದರೆ ವಿಜಯಶಂಕರ್ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರು. ಆರಂಭದಿಂದಲೂ ಫಲಿತಾಂಶದಲ್ಲಿ ಏರಿಳಿತವಿತ್ತು. ಒಂದು ಸುತ್ತಿನಲ್ಲಿ‌ ಪ್ರತಾಪಸಿಂಹ ಮುನ್ನಡೆ ಪಡೆದುಕೊಂಡರೆ ಮತ್ತೊಂದು ಸುತ್ತಿನಲ್ಲಿ ವಿಜಯಶಂಕರ್ ಮುನ್ನಡೆ ಪಡೆದುಕೊಳ್ಳುತ್ತಿದ್ದರು. ಇದರಿಂದ ತೀವ್ರ ಕುತೂಹಲ ಉಂಟಾಗಿತ್ತು. ಅಂತಿಮವಾಗಿ 20 ಸುತ್ತಿನ‌ ಮತ ಎಣಿಕೆ ಬಳಿಕ ಪ್ರತಾಪಸಿಂಹ ಗೆಲುವಿನ ನಗೆ ಬೀರಿದರು. ವಿಧಾನ ಸಭೆ ಕ್ಷೇತ್ರವಾರು ಮತಗಳು ಪ್ರತಾಪಸಿಂಹ. ವಿಜಯಶಂಕರ್ ಮಡಿಕೇರಿ 102161. 58185 ವಿರಾಜಪೇಟೆ 96235. 54738 ಪಿರಿಯಾಪಟ್ಟಣ 53465. 77242 ಹುಣಸೂರು 78986. 82784 ಚಾಮುಂಡೇಶ್ವರಿ 111365 89215 ಕೃಷ್ಣರಾಜ. 96100. 44026 ಚಾಮರಾಜ. 90531. 44480 ನರಸಿಂಹರಾಜ. 56262. 98241

No comments

Post a Comment