ರಷ್ಯಾ ನಿರ್ಮಿತ ' ಸೂಪರ್ ಜೆಟ್ ' ಬೆಂಕಿಗಾಹುತಿ : 41 ಮಂದಿ ಸಾವು

No comments

ರಷ್ಯಾ :ರಷ್ಯಾ ನಿರ್ಮಿತ `ಸೂಪರ್ ಜೆಟ್-100' ವಿಮಾನ ಬೆಂಕಿಗಾಹುತಿಯಾಗಿದ್ದು, ದುರಂತದಲ್ಲಿ 41 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ರಷ್ಯಾದ ಷೆರೆಮೆಟ್ಯೆವೊ ನಿಲ್ದಾಣದಲ್ಲಿ ನಡೆದಿದೆ.
ಮುರ್ಮನ್ಸ್ಕ್ ನಗರಕ್ಕೆ ಹೊರಟಿದ್ದ ಸೂಪರ್ ಜೆಟ್ 100 ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಾಯದ ಸುಳಿವು ಸಿಕ್ಕಿತ್ತು. ಹೀಗಾಗಿ ಮಾಸ್ಕೋದ ಬುಸಿಸ್ಟ್ ವಿಮಾನ 

ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಬೆಂಕಿ ಅವಘಡ ಸಂಭವಿಸಿದೆ.ವಿಮಾನದಲ್ಲಿ ಸುಮಾರು 73 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ಸದ್ಯ ಉಳಿದ ಪ್ರಯಾಣಿಕರ ರಕ್ಷಣೆ ಮಾಡಲಾಗಿದ್ದು, 41 ಮಂದಿ ದುರಂತದಲ್ಲಿ ಮೃತಪಟ್ಟಿದ್ದಾರೆ.

No comments

Post a Comment