ನವದೆಹಲಿ:ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ದೇಶದಲ್ಲಿ ಚಿನ್ನಾಭರಣಗಳ ಬೇಡಿಕೆ ಶೇ 5ರಷ್ಟು ಹೆಚ್ಚಾಗಿದೆ.
ಹಿಂದಿನ ವರ್ಷದ 119 ಟನ್‌ಗಳಿಗೆ ಹೋಲಿಸಿದರೆ, ಈ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದಲ್ಲಿ 125 ಟನ್‌ಗಳಷ್ಟು ಚಿನ್ನಾಭರಣಗಳಿಗೆ ಬೇಡಿಕೆ ಕಂಡು ಬಂದಿದೆ. 2015 ರಿಂದೀಚಿಗಿನ ಗರಿಷ್ಠ ಮಟ್ಟ ಇದಾಗಿದೆ.
ಮೌಲ್ಯದ ಲೆಕ್ಕದಲ್ಲಿಯೂ ಚಿನ್ನಾಭರಣಗಳ ಬೇಡಿಕೆಯು ಶೇ 13ರಷ್ಟು ಹೆಚ್ಚಳವಾಗಿದೆ. 2018ರ ಈ ತ್ರೈಮಾಸಿಕದಲ್ಲಿನ

₹ 32,790 ಕೋಟಿಗೆ ಹೋಲಿಸಿದರೆ, ಈ ವರ್ಷ ₹ 37,070 ಕೋಟಿಗೆ ಏರಿಕೆಯಾಗಿದೆ.ಹೂಡಿಕೆ ಉದ್ದೇಶದ ಚಿನ್ನದ ಬೇಡಿಕೆಯು ಕೂಡ ಹಿಂದಿನ ವರ್ಷದ 32.3 ಟನ್‌ಗಳಿಂದ 33.6 ಟನ್‌ಗಳಿಗೆ ಹೆಚ್ಚಳಗೊಂಡು ಶೇ 4ರಷ್ಟು ಏರಿಕೆ ದಾಖಲಿಸಿದೆ. ಮೌಲ್ಯದ ಲೆಕ್ಕದಲ್ಲಿ ಇದು ₹ 8,890 ಕೋಟಿಗಳಿಂದ ₹ 9,940 ಕೋಟಿಗೆ ಹೆಚ್ಚಳಗೊಂಡಿದೆ.ಡಾಲರ್ ಎದುರು ರೂಪಾಯಿ ವಿನಿಮಯ ದರ ಹೆಚ್ಚಳಗೊಂಡಿರುವುದರಿಂದ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೂ ಬೇಡಿಕೆ ಹೆಚ್ಚಿದೆ. ಚಿನ್ನದ ಮರು ಬಳಕೆಯೂ ಶೇ 14ರಷ್ಟು ಹೆಚ್ಚಾಗಿ 14 ಟನ್‌ಗಳಿಂದ 16 ಟನ್‌ಗಳಿಗೆ ಏರಿಕೆಯಾಗಿದೆ.
ಭಾರತದಲ್ಲಿನ ಈ ಬೇಡಿಕೆ ಭರಾಟೆಯು ಜಾಗತಿಕ ಮಟ್ಟದಲ್ಲಿಯೂ ಚಿನ್ನಾಭರಣಗಳ ಬೇಡಿಕೆಗೆ ಶೇ 1ರಷ್ಟು ಉತ್ತೇಜನ ನೀಡಿದೆ ಎಂದು ವಿಶ್ವ ಚಿನ್ನ ಮಂಡಳಿಯ (ಡಬ್ಲ್ಯುಜಿಸಿ) ವರದಿಯಲ್ಲಿ ತಿಳಿಸಲಾಗಿದೆ. ಚಿನ್ನ ಖರೀದಿಗೆ ಪವಿತ್ರ ದಿನವಾಗಿರುವ 'ಅಕ್ಷಯ ತೃತೀಯ' ಸಂದರ್ಭದಲ್ಲಿಯೇ ಚಿನ್ನಾಭರಣ ವ್ಯಾಪಾರಿಗಳಿಗೆ ಉತ್ತೇಜನಕಾರಿಯಾದ ಮಾಹಿತಿಯನ್ನು ಈ ವರದಿ ಒಳಗೊಂಡಿದೆ.

No comments
Post a Comment