ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಮತಗಟ್ಟೆ ವಶ : ಸ್ಮೃತಿ ಇರಾನಿ ಆರೋಪ

No comments

ಉತ್ತರ ಪ್ರದೇಶ : ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆ ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಈ ಕುರಿತು ಸ್ಮೃತಿ ಇರಾನಿ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರ ಇಂತಹ ರಾಜಕೀಯವನ್ನು ತಿರಸ್ಕರಿಸಬೇಕೋ ಅಥವಾ

 ಪುರಸ್ಕರಿಸಬೇಕೋ ಎಂಬುದು ದೇಶದ ಜನತೆ ಪರಮಾರ್ಶಿಸಬೇಕು ಎಂದು ಹೇಳಿದರು.
ಇನ್ನು ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸ್ಮೃತಿ ಇರಾನಿ, ಪ್ರಿಯಾಂಕಾಗೆ 5 ವರ್ಷದ ಹಿಂದೆ ನನ್ನ ಹೆಸರು ಗೊತ್ತಿರಲಿಲ್ಲ. ಆದರೆ ಇಂದು ಆಕೆ ತನ್ನ ಪತಿಯ ಹೆಸರಿಗಿಂತಲೂ ಹೆಚ್ಚಾಗಿ ನನ್ನ ಹೆಸರನ್ನು ಜಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

No comments

Post a Comment