ಮುಂಬೈ : 2014 ರ ಲೋಕಸಭಾ ಚುನಾವಣೆ ವೇಳೆ ಮಹಾರಾಷ್ಟ್ರದಲ್ಲಿ ನಡೆದ ಹಿಂಸಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಪಕ್ಷದ ಸಂಸದನ ಪತ್ನಿ ಹಾಗೂ ಪಕ್ಷದ 17 ಕಾರ್ಯಕರ್ತರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮುಂಬೈನ ದಕ್ಷಿಣ ಕೇಂದ್ರದ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಶಿವಸೇನೆ ಪಕ್ಷದ ನಾಯಕ ರಾಹುಲ್ ಶೆವಾಲೆ ಅವರ ಪತ್ನಿ ಕಾಮಿನಿ ಶೆವಾಲೆ ಮತ್ತು ಕಾರ್ಯಕರ್ತರಿಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ.
2014 ರ ಏಪ್ರಿಲ್ ನಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಮುಂಬೈನ ದಕ್ಷಿಣ ಕೇಂದ್ರ ಕ್ಷೇತ್ರದ ಉಪನಗರ ತ್ರೋಂಬೆಯಲ್ಲಿ ಮತದಾರರಿಗೆ ಹಣ ಹಂಚಲಾಗುತ್ತಿದೆ ಎಂಬ ವಿಚಾರವಾಗಿ ಶಿವಸೇನೆ ಹಾಗೂ ಮಹಾರಾಷ್ಟ್ರದ ನವನಿರ್ಮಾಣ ಸೇನೆ ಪಕ್ಷಗಳ ನಡುವೆ ಗಲಾಟೆ ನಡೆದಿತ್ತು.

No comments
Post a Comment