ಮೋದಿ ಮತ್ತೊಮ್ಮೆ ಪ್ರಧಾನಿಯಾಗದ್ದಿದ್ದರೆ ಆತ್ಮಹತ್ಯೆ: ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ

No comments

ಲಖನೌ:ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗದಿದ್ದರೆ ಅಯೋಧ್ಯೆಯ ರಾಮ ಮಂದಿರ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಉತ್ತರ ಪ್ರದೇಶ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಅಧ್ಯಕ್ಷ ವಸೀಮ್‍ ರಿಜ್ವಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲಿಸುತ್ತಿರುವುದರಿಂದ ಕೆಲ ಮತಾಂಧ ಮುಸ್ಲೀಮರಿಂದ ತಮಗೆ ಜೀವ ಬೆದರಿಕೆಗಳು ಬರುತ್ತಿದ್ದು, ಮೋದಿ ಸೋತರೆ, ತಮಗೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿ ಇಲ್ಲ ಎಂದು ರಿಜ್ವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 'ಧರ್ಮಕ್ಕೂ ಮೀರಿ ರಾಷ್ಟ್ರೀಯತೆಯನ್ನು ಸದಾ ಬೆಂಬಲಿಸುತ್ತೇನೆ. ಮೋದಿ ಬಿಟ್ಟು ಯಾರೊಬ್ಬರು ಪ್ರಧಾನಿಯಾದರೂ ರಾಮ ಮಂದಿರ ದ್ವಾರದ ಬಳಿ ಬೆಂಕಿ ಹಚ್ಚಿಕೊಂಡು ಸಾಯುತ್ತೇನೆ' ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯತೆ ಬಗ್ಗೆ ಮಾತನಾಡಿದಾಗ ಮತಾಂಧರು ತಮಗೆ ಬೆದರಿಕೆ ಒಡ್ಡುತ್ತಾರೆ.

No comments

Post a Comment