10 ರೂಪಾಯಿ ನೀಡಿದರೆ ಸರಕಾರಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ: ಕಾರ್ಡ್ ಇಲ್ಲದಿದ್ದರೂ ರಿಯಾಯ್ತಿ ದರದಲ್ಲಿ ಚಿಕಿತ್ಸೆ

No comments

ಬೆಂಗಳೂರು : ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಡಿ ಬಡವರಿಗೆ ಹಾಗು ಮಧ್ಯಮ ವರ್ಗದವರಿಗೆ ಕಾರ್ಡ್ ವಿತರಿಸುವಾಗ ಯಾವುದೇ ಅವ್ಯವಹಾರವಾಗದಂತೆ ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಜ್ಜಾಗಿದೆ. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ಗಳ ನಕಲಿ ಸೃಷ್ಟಿ ಅಥವ ವಿತರಣೆಯಲ್ಲಿ ಅವ್ಯವಹಾರ ಇನ್ನೂ ಅಸಾಧ್ಯವಾಗಲಿದೆ.ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 32,59,532 ಕ್ಕೂ ಹೆಚ್ಚು ಕಾರ್ಡ್ ಗಳನ್ನು ವಿತರಿಸಲಾಗಿದೆ. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರ್ಡ್ ವಿತರಣೆಯವೇಳೆ ಅವ್ಯವಹಾರ ನಡೆಯುತ್ತಿರುವ ಕುರಿತು ಇಲಾಖೆಗೆ ದೂರುಗಳು ಬಂದಿವೆ. ರಾಜ್ಯ ಸರ್ಕಾರದ ಈ ಮಹತ್ವಾಕಂಕ್ಷಿ ಯೋಜನೆಯನ್ನು ಜಾರಿ ತರುವಲ್ಲಿ ಕಂಕಣಬದ್ಧವಾಗಿರುವ ಆರೋಗ್ಯ ಇಲಾಖೆ ಕಾರ್ಡ್ ವಿತರಿಸುವ ಎಲ್ಲಾ ಹಂತಗಳಲ್ಲೂ ಮಹತ್ವದ ಬದಲಾವಣೆ ತಂದಿದೆಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವ ಜವಾಬ್ದಾರಿ ಸರ್ಕಾರಿ ಆಸ್ಪತ್ರೆಗಳು, ಸೇವಾ ಸಿಂಧು ಕೇಂದ್ರ, ಬೆಂಗಳೂರು ಒನ್ ಹಾಗು ಕರ್ನಾಟಕ ಒನ್ ಸಿಬ್ಬಂದಿಗಳು ಬಯೋಮೆಟ್ರಿಕ್ ದಾಖಲೆಗಳನ್ನು ನೀಡಿ ತಮ್ಮ ಕಂಪ್ಯೂಟರ್ ಹಾಗು ಕಛೇರಿಗೆ ಪ್ರವೇಶ ಪಡೆಯುವುದು ಕಡ್ಡಾಯ ಮಾಡಲಾಗಿದೆ.

No comments

Post a Comment