ನವದೆಹಲಿ : ಟಿಕ್ ಟಾಕ್ ಆಯಪ್ ಬ್ಲಾಕ್ ಮಾಡುವಂತೆ ಗೂಗಲ್ ಗೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆ ಗೂಗಲ್ ಪ್ಲೇಸ್ಟೋರ್ ನಿಂದ ಟಿಕ್ ಟಾಕ್ ಆಯಪ್ ನ್ನು ತೆಗೆದು ಹಾಕಿದೆ.ಟಿಕ್ ಟಾಕ್ ಆಯಪ್ ನಿಂದ ಅಶ್ಲೀಲ ವಿಡಿಯೋಗಳು ಹೆಚ್ಚಾಗುತ್ತಿವೆ. ಅಲ್ಲದೇ ಚಿಕ್ಕಮಕ್ಕಳು ಕೂಡ ಟಿಕ್ ಟಾಕ್ ಬಳಕೆ ಮಾಡುತ್ತಿದ್ದು, ಇದು ಅವರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಅಲ್ಲದೇ ಲೈಂಗಿಕ ಆಕ್ರಮಣತೆ ಕೂಡ ಹೆಚ್ಚಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು.ಮದ್ರಾಸ್ ಹೈಕೋರ್ಟ್ ಏಪ್ರಿಲ್ 3 ರಂದು ಟಿಕ್ ಟಾಕ್ ಆಯಪ್ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಇದೀಗ ಕೋರ್ಟ್ ಆದೇಶದಂತೆ ಗೂಗಲ್ ಮತ್ತು ಆಯಪಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿತ್ತು.ಅದರಂತೆ ಗೂಗಲ್ ಅಪ್ಲಿಕೇಶನ್ ಅನ್ನು ಬ್ಲಾಕ್ ಮಾಡಿದೆ.

No comments
Post a Comment