ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ತಿಳಿಯುವುದು ಹೇಗೆ...?

No comments

2019ರ ಲೋಕಸಭಾ ಚುನಾವಣೆ ಶುರುವಾಗಿದ್ದು, ಎಲ್ಲೆಡೆ ಮತದಾನದ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಮತದಾನ ಮಾಡಲು ಚುನಾವಣೆ ಆಯೋಗವು ನೀಡುವ ಗುರುತಿನ ಚೀಟಿ ಇರಬೇಕು. ಕೆಲವೊಮ್ಮೆ ಚುನಾವಣೆ ಗುರುತಿನ ಚೀಟಿ ಇದ್ದರೂ, ಮತಗಟ್ಟೆಯಲ್ಲಿ ಹೆಸರುಗಳು ಬಂದಿರುವುದಿಲ್ಲ. ಈ ಗೊಂದಲವನ್ನು ತಪ್ಪಿಸಲು ನೀವು ಮನೆಯಲ್ಲಿಯೇ ಕುಳಿತು ಮೊಬೈಲ್‌ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನಮೂದಾಗಿದೆಯಾ ಎಂಬುದನ್ನು ತಿಳಿದುಕೊಳ್ಳಬಹುದು.
ಮೇಸೆಜ್ ಮೂಲಕ ತಿಳಿಯಿರಿ
ಹಂತ.1 ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮೆಸೆಜ್‌ ತೆರೆಯಿರಿ
ಹಂತ.2 EPIC ಎಂದು ಬರೆದು ಸ್ಪೇಸ್‌ ಬಿಟ್ಟು EPIC No.(ನಿಮ್ಮ ಚುನಾವಣೆ ಚೀಟಿಯಲ್ಲಿರುವ ಎಪಿಕ್ ನಂಬರ್‌ ಬರೆಯಿರಿ)
ಹಂತ.3 ನಂತರ ಈ ನಂಬರ್‌ಗೆ ಕಳುಹಿಸಿ-7738299899
ಹಂತ.4 ನಿಮಗೊಂದು ಎಸ್‌ಎಮ್‌ಎಸ್‌ ಬರುತ್ತದೆ ಅದರಲ್ಲಿ ಹೆಸರು ನಮೂದಾಗಿಯೋ ಅಥಾವಾ ಇಲ್ಲಯೋ ಎಂಬ ಮಾಹಿತಿ ಇರುತ್ತದೆ.
ಕರೆಯ ಮೂಲಕ ತಿಳಿಯಿರಿ
ಹಂತ.1 ನಿಮ್ಮ ಮೊಬೈಲ್‌ನಲ್ಲಿ ಕಾಲ್‌ ಡೈಯಲ್‌ ತೆರೆಯಿರಿ
ಹಂತ.2 ನಂತರ 1950 ನಂಬರ್‌ಗೆ ಕರೆ ಮಾಡಿರಿ
ಹಂತ.3 ಕರೆಯಲ್ಲಿ ನಿಮಗೆ ಚುನಾವಣಾ ಗುರುತಿನ ಚೀಟಿಯ (Voter ID) ಎಪಿಕ್ ನಂಬರ್, ಸ್ಥಳದ, ಮಾಹಿತಿ ಕೇಳಲಾಗುತ್ತದೆ.
ಹಂತ.4 ನೀವು ಮಾಹಿತಿ ತಿಳಿಸಿದ ನಂತರ ನಿಮ್ಮ ಹೆಸರು ನಮೂದಾರಿದೆಯೋ ಅಥವಾ ಇಲ್ಲವೋ ಎಂಬದನ್ನು ತಿಳಿಸುತ್ತಾರೆ.
WEBSITE
ಹಂತ.1 ​ಸ್ಮಾರ್ಟ್‌ಫೋನ್‌ ಅಥವಾ ಪಿಸಿಯಲ್ಲಿ www.nvsp.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ.2 ಮತದಾರರ ಪಟ್ಟಿಯಲ್ಲಿ ಹೆಸರಿದೆ ಆಯ್ಕೆಯನ್ನು ಕ್ಲಿಕ್‌ ಮಾಡಿ.(Search Your Name in Electoral Roll)
ಹಂತ.3 ನಂತರ ಎಪಿಕ್ ನಂಬರ್‌ ಎಂಟ್ರಿ ಮಾಡಿ ಸರ್ಜ್‌ ಆಯ್ಕೆ ಒತ್ತಿರಿ.
ಹಂತ.4 ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲ ಎನ್ನುವ ಮಾಹಿತಿ ಕಾಣಿಸುತ್ತದೆ.

No comments

Post a Comment