ಚುನಾವಣೆ ಬಳಕೆಗೆ 400 ಬಸ್

No comments

ಮಹಾನಗರ:ಸರಕಾರಿ ಬಸ್‌ಗಳನ್ನು ಚುನಾವಣೆಗೆ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆಯಲ್ಲಿ ಗಮನಾರ್ಹವಾದ ವ್ಯತ್ಯಯವಾಗಲಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಓಡಾಟಕ್ಕೆ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯ.
ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ಚುನಾವಣ ಕಾರ್ಯಕ್ಕೆ ತೆರಳಲಿವೆ. ಮಂಗಳೂರು ವಿಭಾಗದಿಂದ ಪ್ರತೀ ದಿನ ಸುಮಾರು 389ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತವೆ. ಈ ಬಾರಿ ಎ. 17, 18ರಂದು ಮಂಗಳೂರಿನ ಒಂದು ಮತ್ತು ಎರಡನೇ ಡಿಪೋದಿಂದ 138ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ಚುನಾ ವಣೆಯ ಕಾರ್ಯಕ್ಕೆ ತೆರಳಲಿವೆ. ಇನ್ನು ಪುತ್ತೂರು ವಿಭಾಗದಿಂದ (ಪುತ್ತೂರು, ಬಿಸಿ ರೋಡ್‌, ಧರ್ಮ ಸ್ಥಳ, ಮಡಿಕೇರಿ, ಸುಳ್ಯ) ಪ್ರತಿ ದಿನ 560 ಬಸ್‌ಗಳು ಸಂಚರಿಸುತ್ತವೆ.
ಇದರಲ್ಲಿ 263 ಬಸ್‌ಗಳು ವ್ಯತ್ಯಯ ಉಂಟಾಗಲಿವೆ. ಪುತ್ತೂರು ತಾಲೂಕಿಗೆ 35 ಬಸ್‌, ಬೆಳ್ತಂಗಡಿ ತಾಲೂಕಿಗೆ 36, ಬಂಟ್ವಾಳ-28, ಸುಳ್ಯ-27, ಮೂಡುಬಿದಿರೆ-47, ಮಡಿಕೇರಿ-42, ವಿರಾಜಪೇಟೆಗೆ-48 ಬಸ್‌ಗಳು ಚುನಾವಣ ಕಾರ್ಯನಿಮಿತ್ತ ಹೋಗಲಿದ್ದು, ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಲಿದೆ.

No comments

Post a Comment