ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿಸೂರ್ಯ ಪರ ಮತ ಯಾಚಿಸಲು ಹೋಗಿದ್ದ ಬೊಮ್ಮನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಸಿ.ಆರ್.ರಾಮಮೋಹನ್ ರಾಜು ಅವರು ಮುಸ್ಲಿಮರೊಬ್ಬರ ಮನೆ ಬಳಿ ಕಟ್ಟಿದ್ದ ಧರ್ಮದ ಧ್ವಜವನ್ನು (ಗೌಸ್-ಹೇ-ಪಾಕ್) ಬೆಳಿಗ್ಗೆ ಕಿತ್ತು ತೆಗೆದಿರುವುದು ವಿವಾದದ ಸ್ವರೂಪ ಪಡೆದಿದೆ.ರಾಮಮೋಹನ್ ರಾಜು ಅವರು ಬೊಮ್ಮನಹಳ್ಳಿಯ ವಿರಾಟ್‌ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸೋಮವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಕಟ್ಟಡದ ಮೊದಲ ಮಹಡಿಯಲ್ಲಿದ್ದ ಸಯ್ಯದ್ ಷರೀಫ್ ಅವರ ಮನೆಗೆ ಮತ ಯಾಚನೆಗೆ ಹೋಗಿದ್ದ ವೇಳೆ ಅರ್ಧಚಂದ್ರ ಮತ್ತು ನಕ್ಷತ್ರದ ಚಿಹ್ನೆಯನ್ನು ಹೊಂದಿದ್ದ ಹಸಿರು ಬಣ್ಣದ ಧ್ವಜ ಅವರ ಕಣ್ಣಿಗೆ ಬಿದ್ದಿತ್ತು. ಅದು ಪಾಕಿಸ್ತಾನದ ಧ್ವಜ ಎಂದು ತಪ್ಪಾಗಿ ಭಾವಿಸಿದ್ದ ಅವರು ಅದನ್ನು ಕಿತ್ತುಹಾಕಿದ್ದಾರೆ.ಈ ವೇಳೆ ಸಯ್ಯದ್ ಅವರ ತಾಯಿ ಶಹಜಹಾನ್ ಬೇಗಂ ಅವರು ಮನೆಯಲ್ಲಿದ್ದರು. ರಾಮಮೋಹನ್ ರಾಜು ಜೊತೆಗಿದ್ದ ಬಿಜೆಪಿ ಕಾರ್ಯಕರ್ತರು, 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುತ್ತಾ ಶಹಜಹಾನ್ ಅವರನ್ನು ಹೊರಕ್ಕೆ ಕರೆದಿದ್ದಾರೆ. 'ಈ ಧ್ವಜ ಇಲ್ಲಿರುವುದು ಇದು ಬೇಡ. ನೀವು ಹಸಿರು ಬಣ್ಣದ್ದನ್ನು ಹಾಕಿಕೊಳ್ಳಿ. ನಾನೇ ಕೊಡುತ್ತೇನೆ' ಎಂದು ಪಾಲಿಕೆ ಸದಸ್ಯ ಹೇಳಿದ್ದಾರೆ. ಅದು ತಮ್ಮ ಧರ್ಮದ ಧ್ವಜ ಎಂದು ಮನವರಿಕೆ ಮಾಡಲೂ ಮಹಿಳೆ ಯತ್ನಿಸಿದರೂ ಅವರು ಕೇಳಿಲ್ಲ.ಘೋಷಣೆ ಕೂಗುವಂತೆ ಒತ್ತಾಯ: 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುವಂತೆಯೂ ಮಹಿಳೆಯನ್ನು ಪಾಲಿಕೆ ಸದಸ್ಯ ಬಲವಂತ ಮಾಡಿದ್ದಾರೆ. ಮಹಿಳೆ 'ಭಾರತ್ ಮಾತಾಕಿ ಜೈ' ಎಂದು ಹೇಳಿದ ಬಳಿಕ 'ವಂದೇ ಮಾತರಂ' ಎಂದು ಘೋಷಣೆ ಕೂಗುತ್ತಾ ಧ್ವಜದೊಂದಿಗೆ ಹಿಂತಿರುಗಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಬಿಜೆಪಿ ಕಾರ್ಯಕರ್ತರು ವಿಡಿಯೊವನ್ನು ವಾಟ್ಸ್ ಆಯಪ್‌ಗಳಲ್ಲಿ ಹಾಗೂ ಫೇಸ್‌ಬುಕ್‌ಗಳಲ್ಲಿ ಹರಿಯಬಿಟ್ಟಿದ್ದಾರೆ.
'ಸಯ್ಯದ್ ಕುಟುಂಬದವರು 'ಪೂರ್ಗಿ ಫಾದ್ಯ' ಎಂಬ ಹಬ್ಬವನ್ನು ಶ್ರದ್ಧೆಯಿಂದ ಚರಿಸುತ್ತಾರೆ. ಈ ಸಲುವಾಗಿ ವ್ರತ ಆಚರಿಸುತ್ತಾರೆ. ಆ ದಿನಗಳಲ್ಲಿ ಮಧು ಮಾಂಸವನ್ನೂ ಸ್ವೀಕರಿಸುವುದಿಲ್ಲ. ಹಬ್ಬದ ವೇಳೆ ಭೇಟಿ ನೀಡುವ ಬಂಧುಗಳು ಮನೆಯನ್ನು ಗುರುತಿಸಲು ನೆರವಾಗಲಿ ಎಂಬ ಕಾರಣಕ್ಕೆ ಮನ ಬಳಿ ಧರ್ಮದ ಧ್ವಜ ಕಟ್ಟಿರುತ್ತಾರೆ. ಅದನ್ನು ಕಿತ್ತಿದ್ದಾರೆ. ಪಾಲಿಕೆ ಸದಸ್ಯರೇ ಧರ್ಮಕ್ಕೆ ಅವಮಾನ ಮಾಡುವುದು ಸರಿಯೇ' ಎಂದು ಮುಸ್ಲಿಂ ಮುಖಂಡ ಸಯ್ಯದ್ ಸರ್ದಾರ್ ಪ್ರಶ್ನಿಸಿದರು.

No comments
Post a Comment