ಸುಂಟಿಕೊಪ್ಪದಲ್ಲಿ ರಕ್ಷಣಾ ತಂಡಗಳಿಂದ ಪಥಸಂಚಲನ

No comments
ಮೈಸೂರು-ಕೊಡಗು ಲೋಕಸಭಾ ಸುದ್ದಿ

ಸುಂಟಿಕೊಪ್ಪ,ಏ.15: ಲೋಕಸಭಾ ಚುನಾವಣೆಯ ಸಮೀಪಿಸುತ್ತಿರುವಂತೆ ರಕ್ಷಣಾ ತಂಡಗಳಿಂದ ಆರೇ ಸೇನಾಪಡೆ, ಜಿಲ್ಲಾ ಪೊಲೀಸ್ ಶಸ್ತ್ರದಳ ಹಾಗೂ ಪೊಲೀಸ್ ಸಿಬ್ಬಂದಿಗಳ ವತಿಯಿಂದ ಸುಂಟಿಕೊಪ್ಪ ಪಟ್ಟಣದಲ್ಲಿ ಸೋಮವಾರ ಪಥಸಂಚಲನವನ್ನು ನಡೆಸಲಾಯಿತು.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಅರೇ ಸೇನಾಪಡೆಯ ಸಿಬ್ಬಂದಿಗಳು ವಿವಿಧ ಶಸ್ತಾಸ್ತ್ರಗಳೊಂದಿಗೆ ಗದ್ದೆಹಳ್ಳದ ಗಾಂಧಿ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸುವ ಮೂಲಕ ತಾ.18 ರಂದು ಸಾರ್ವತ್ರಿಕ ಚುನಾವಣೆಯು ನಡೆಯುತ್ತಿದ್ದು ಜನತೆಯು ಮತದಾನಕ್ಕೆ ಯಾವುದೇ ರೀತಿಯ ಅಡ್ಡಿ ಅತಂಕಗಳು ಎದುರಾಗದಂತೆ ಮುಂಜಾಗ್ರತ ಕ್ರಮವಾಗಿ ಅರೇ ಸೇನಾಪಡೆಯ ಸಿಬ್ಬಂದಿಗಳು ನಿಮ್ಮಗಳ ರಕ್ಷಣೆಗಾಗಿ ನಿಯೋಜಿಸಲಾಗಿದೆ. ಮತದಾರರು ಯಾವುದೇ ನಿರ್ಭೀತಿಯಿಲ್ಲದೆ ಮತದಾನ ಕೇಂದ್ರಗಳಿಗೆ ಆಗಮಿಸಿ ಮತ ಚಲಾಯಿಸುವುದು ಮುಖ್ಯ ಯಾವುದೇ ಅಹಿತಕರ ಘಟನೆಗಳ ಊಹಾ ಪೋಹ ವಿಚಾರಗಳಿಗೆ ಸಾರ್ವಜನಿಕರು ಕಿವಿಗೊಡದೆ ಕಡ್ಡಾಯ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕೆಂದರು.
ಈ ಸಂದರ್ಭ ಸೋಮವಾರಪೇಟೆ ತಾಲೂಕು ಡಿವೈಎಸ್‍ಪಿ ದಿನಕರ ಶೆಟ್ಟಿ, ಕುಶಾಲನಗರ ವೃತ್ತನಿರೀಕ್ಷಕರಾದ ದಿನೇಶ್‍ಕುಮಾರ್, ಮಡಿಕೇರಿ ಜಿಲ್ಲಾ ಶಸ್ತ್ರದಳದ ವೃತ್ತನಿರೀಕ್ಷಕರಾದ ರಾಚಯ್ಯ, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಹಾಗೂ ಸಿಬ್ಬಂದಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

No comments

Post a Comment