ಕೊಡಗು
ಸುಂಟಿಕೊಪ್ಪ,ಏ.15: ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಹಾಗೂ ಮಹಾಪೂಜೆ, ಎತ್ತು ಪೋರಾಟ್, ಚಾರಿಕುಣಿತವು ಸೋಮವಾರ ಶೃದ್ಧಾ ಭಕ್ತಿಯಿಂದ ದೇವಾಸ್ಥಾನದಲ್ಲಿ ಸಂಪನ್ನಗೊಂಡಿತು.
ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವವು ಕಳೆದ 7 ದಿನಗಳ ಕಾಲ ವೃತ್ತದಲ್ಲಿ ತೊಡಗಿಸಿಕೊಂಡು ದೇವಾಲಯಲದಲ್ಲಿ ವೃತ್ತಾಚರಣೆಯ ಅಂಗವಾಗಿ 6 ದಿನಗಳ ಕಾಲ ವಿಶೇಷ ಪೂಜೆಯಲ್ಲಿ ಸುಂಟಿಕೊಪ್ಪ, ಆಂಜನಗೇರಿ ಬೇಟಗೇರಿ, ಹರದೂರು ಗ್ರಾಮದ ಜನತೆಯು ಚಾರಿಕುಣಿತ ನಡೆಸುತ್ತ ದೇವಿಗೆ ಪೂಜೆಯನ್ನು ಸಮರ್ಪಿಸಲಾಗುತ್ತದೆ.
ಕೊನೆಯ ದಿನವಾದ ಸೋಮವಾರ ದೇವಸ್ಥಾನದಲ್ಲಿ ಕೊಡವ ಮತ್ತು ಗೌಡ ಮನೆತನದ ಯುವಕ ಮತ್ತು ಪುರುಷರು ಕೊಡಗಿನ ಸಾಪ್ರಾದಾಯಿಕ ಉಡುಪ್ಪಾದ ಬಿಳಿ ಬಣ್ಣದ ಕುಪ್ಪುಚಾಲೆಯು ಧರಿಸುವ ಮೂಲಕ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಳ್ಳುವ ಪುರುಷರು ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ಆಗಮಿಸಿ ದೇವಾಲಯದಲ್ಲಿ ದೇವಿಗೆ ಭಂಡಾರವನ್ನು ಸಮರ್ಪಿಸಿಲಾಗುತ್ತದೆ.ನಂತರ ಗ್ರಾಮದ ಜನತೆಯಿಂದ ಎತ್ತು ಪೋರಾಟ್, ಚಾರಿಕುಣಿತವನ್ನು ನಡೆಸಿದರು. ನಂತರ ದೇವಿಗೆ ಪೂಜೆ ಆರ್ಪಿಸುವ ಮೂಲಕ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.
ಸಾರ್ವಜನಿಕರಿಗೆ, ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

No comments
Post a Comment