ಸೈಕಲ್ ನಲ್ಲಿ ಬಿಜೆಪಿ ಪರ ಮತಯಾಚನೆ೧೫೦ ಕಿಮೀ ಚಲಿಸಿ ಮತಯಾಚಿಸಿದ ಸುಮೇಶ್

No comments
ರಾಜಕೀಯ 

ಸೈಕಲ್ ನಲ್ಲಿ ಬಿಜೆಪಿ ಪರ ಮತಯಾಚನೆ
150ಕಿಮೀ ಚಲಿಸಿ ಮತಯಾಚಿಸಿದ  ಸುಮೇಶ್
ಸಿದ್ದಾಪುರ : ಕೊಡಗು ಮೈಸೂರು ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪರ  ಕಾರ್ಯಕರ್ತನೋರ್ವ ಸೈಕಲ್ ನಲ್ಲಿ 150 ಕಿಲೋಮೀಟರ್ ಚಲಿಸಿ ಮತಯಾಚಿಸಿದ್ದಾರೆ.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ  ಟಿ.ಕೆ  ಸುಮೇಶ್   ಕಳೆದ ಹಲವು ವರ್ಷಗಳಿಂದಲೂ ಸಕ್ರಿಯವಾಗಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಇದೀಗ ಬಿಜೆಪಿ ಪಕ್ಷದ  ಅಭ್ಯರ್ಥಿ ಪ್ರತಾಪ್ ಸಿಂಹ ಪರ ಮತಯಾಚಿಸಿ ಮತ್ತೊಮ್ಮೆ ನರೇಂದ್ರ ಮೋದಿಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮತಯಾಚನೆ ಮಾಡುತ್ತಿದ್ದಾರೆ
ಕಳೆದ  ನಾಲ್ಕು ದಿನಗಳ ಹಿಂದೆ ನಂಜರಾಯಪಟ್ಟಣ ದಿಂದ ತಮ್ಮ ಸೈಕಲ್ ನಲ್ಲಿ ಬಿಜೆಪಿ ಪಕ್ಷದ ಧ್ವಜವನ್ನು ಕಟ್ಟಿಕೊಂಡು  ಕುಶಾಲನಗರ,ಕೂಡಿಗೆ, ಗುಡ್ಡೆಹೊಸರು,ಕಂಬಿಬಾಣೆ,7ನೇಹೊಸಕೊಟೆ,ವಾಲ್ನೂರು,  ಜೋತಿನಗರ,ನೆಲ್ಯಹುದಿಕೇರು,ಸಿದ್ದಾಪುರ  ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ  ಸಿದ್ದಾಪುರ, ನೆಲ್ಯಹುದಿಕೇರಿ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಇವರನ್ನು ಬರಮಾಡಿಕೊಂಡು ಮತಯಾಚನೆಯಲ್ಲಿ ಸಾಥ್ ನೀಡಿದ್ದಾರೆ

No comments

Post a Comment