ಚನ್ನಯ್ಯನಕೊಟೆಯಲ್ಲಿ ಸಿ.ಎಚ್ ವಿಜಯ ಶಂಕರ್ ಪರ ಮತಯಚನೆಗೆ ಚಾಲನೆ
ಸಿದ್ದಾಪುರ :
ಸರ್ವ ಧರ್ಮೀಯರನ್ನು ಸಮಾನಾಂತರವಾಗಿ ಕೊಂಡೊಯ್ಯುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆಇದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಾ. ತಿಮ್ಮಯ್ಯ ತಿಳಿಸಿದರು. ಚೆನ್ನಯ್ಯನ ಕೋಟೆ ಗ್ರಾಮದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಸಿ .ಹೆಚ್ ವಿಜಯಶಂಕರ್ ಪರವಾಗಿ ಮತಯಾಚನೆಗೆ ಚಾಲನೆ ನೀಡಿ ಮಾತನಾಡಿದ ಅವರು ಭಾರತವು ಸರ್ವಧರ್ಮ ಸಹಿಷ್ಣುತೆಯ ರಾಷ್ಟ್ರವಾಗಿದ್ದು ಎಲ್ಲಾ ಧರ್ಮದ ಜನಾಂಗವನ್ನು ಒಂದೇ ಪಥದಲ್ಲಿ ಕೊಂಡೊಯ್ಯುವ ಶಕ್ತಿಯನ್ನು ಈ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಹೊಂದಿದ್ದು ಆ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೆಗ್ಗಳಿಕೆಯೂ ಕಾಂಗ್ರೆಸ್ ಪಕ್ಷಕ್ಕಿದೆ. ಕೇವಲ ಬೂಟಾಟಿಕೆಗೋಸ್ಕರ ದೇಶ ಪ್ರೇಮವನ್ನು ವ್ಯಕ್ತಪಡಿಸುವ ಮೂಲಕ ಬಿಜೆಪಿ ಮತಯಾಚನೆ ಮಾಡುತ್ತಿರುವುದು ದುರದೃಷ್ಟಕರ
.
ಕಾಂಗ್ರೆಸ್ ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸುವವರು ದೇಶವನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢವಾಗಿ ಬೆಳೆಯಲು ಸಾಹಕಾರ ನೀಡುವವರಾಗಿದ್ದಾರೆ

ಜನಸಾಮಾನ್ಯರ ಹಿತ ಕಾಯುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಸಿ ಎಚ್ ವಿಜಯಶಂಕರ್ ಅವರನ್ನು ಈ ಬಾರಿ ಲೋಕಸಭೆಗೆ ಆರಿಸಿ ಕಳಿಸಿ ಕೊಡಗಿನ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾವುಗಳು ಸಹಕರಿಸಬೇಕು ಎಂದರು. ಚೆನ್ನಯ್ಯ ನ ಕೋಟೆಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯ ಪರ ಮತಯಾಚನೆ ಮಾಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಸಿ. ಸಣ್ಣಯ್ಯ,ತಾಲೂಕು ಪಂಚಾಯಿತಿ ಸದಸ್ಯೆ ಕಾವೇರಮ್ಮ,ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ಯೋಗೀಶ್, ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅದ್ಯಕ್ಷ ನಿಂಗರಾಜು, ದಲಿತ ಮುಖಂಡ ಸುರೇಶ್ ,
ಗ್ರಾಮ ಪಂಚಾಯಿತಿ ಸದಸ್ಯರಾದ ಸುಶೀಲಾ, ಶೀಲ , ಪ್ರಕಾಶ್.ವಲಯ ಕಾಂಗ್ರೆಸ್ ಅಧ್ಯಕ್ಷ ವಾಟೇರಿರ ಸುರೇಶ್ ಸೋಮಯ್ಯ,ಪ್ರಮುಖರಾದ ಸೀಗೊರು ವಿಜಯ್ ಕುಮಾರ್,ತಮ್ಮಣಯ್ಯ,ಭೂತನಹಳ್ಳಿ ಶಿವಣ್ಣ. ಚೆನ್ನ ಕಲ್ಲು ಶೇಖರ್,ಆರ್.ಡಿ.ಚಂದ್ರು,ಚೌತಿ ಮಲ್ಲಣ್ಣ,ಆರ್. ಡಿ ಕುಮಾರ್ ,ಭೂತನಹಳ್ಳಿ ಶಿವಣ್ಣ ಸೇರಿದಂತೆ ಇನ್ನಿತರರು ಈ ಸಂದರ್ಭ ಹಾಜರಿದ್ದರು.

No comments
Post a Comment