ಕಳೆದ ಒಂದು ತಿಂಗಳಲ್ಲಿ ಮೋದಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆಯಲ್ಲಿ ಇಳಿಕೆ!

No comments

ನವದೆಹಲಿ:ಬಿಜೆಪಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸಿ-ವೋಟರ್-ಐಎಎನ್‌ಎಸ್ ಸಮೀಕ್ಷೆ ಹೇಳಿದೆ.ಬಾಲಾಕೋಟ್ ವೈಮಾನಿಕ ದಾಳಿ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅನುಮೋದಿಸುವವರ ಪ್ರಮಾಣ ಶೇ.62.06 ರಷ್ಟಿತ್ತು ಆದರೆ ಮಾ,12 ರಿಂದ ಏ.12 ವರೆಗೆ ಮೋದಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ 12 ಅಂಕಗಳಷ್ಟು ಕಡಿಮೆಯಾಗಿದೆ ಎಂದು ಸಿ-ವೋಟರ್-ಐಎಎನ್‌ಎಸ್ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ ಮಾ.22 ವರೆಗೆ 50 ರಷ್ಟಿತ್ತು. ಆದರೆ ಏ.12 ಅಂದರೆ 91 ಕ್ಷೇತ್ರಗಳಿಗೆ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದ ಬಳಿಕ ಶೇ.43.25 ಕ್ಕೆ ಕುಸಿದಿದೆ.

No comments

Post a Comment