ಏಪ್ರಿಲ್ ೧೧ ರಂದು ಜಿಲ್ಲೆಗೆ ಶಾಸಕ ಎನ್.ಎ.ಹ್ಯಾರಿಸ್ ಭೇಟಿ
ಮಡಿಕೇರಿ ಏ.10 :
ಬೆಂಗಳೂರು ಶಾಂತಿ ನಗರದ ಶಾಸಕ ಎನ್.ಎ.ಹ್ಯಾರಿಸ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ರಫೀಕ್ ಆಹ್ಮದ್ ಅವರು ಏ.11 ರಂದು ಕೊಡಗಿಗೆ ಭೇಟಿ ನೀಡಿ ಮೈತ್ರಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಗೆ ವಿರಾಜಪೇಟೆ, ಮಧ್ಯಾಹ್ನ 12 ಗಂಟೆಗೆ ಎಮ್ಮೆಮಾಡು ಹಾಗೂ 2 ಗಂಟೆಗೆ ಮಡಿಕೇರಿ ಮೈತ್ರಿ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
No comments
Post a Comment