ದೇವರ ದಾಸಿಮಯ್ಯ ಜಯಂತೋತ್ಸವ:

No comments

ದೇವರ ದಾಸಿಮಯ್ಯ ಜಯಂತ್ಯುತ್ಸವ : ವಚನ ಸಿದ್ಧಾಂತದಿಂದ ಸಾಮಾಜಿಕ ಸುಧಾರಣೆಯಾಗಿದೆ : ಗಣ್ಯರ ಅಭಿಮತ
ಮಡಿಕೇರಿ ಏ.೧೦ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ಶ್ರೀ ದೇವರ ದಾಸಿಮಯ್ಯ ಜಯಂತ್ಯುತ್ಸವ ಸಮಾರಂಭವು ಸರಳವಾಗಿ ನಡೆಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ, ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಇತರರು ಪಾಲ್ಗೊಂಡು ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ದೇವರ ದಾಸಿಮಯ್ಯನವರು ಅಪ್ಪಟ ಶಿವಭಕ್ತರು. ಅವರ ತತ್ವ ನಿಷ್ಠೆ ಅನುಕರಣೀಯವಾದದ್ದು, ಅವರು ಇಡೀ ಕರ್ನಾಟಕದ ಆಸ್ತಿ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಹತ್ತನೆಯ ಶತಮಾನದಲ್ಲಿ ವಚನಕಾರರಲ್ಲಿ ದೇವರ ದಾಸಿಮಯ್ಯ ಅವರು ಪ್ರಮುಖರಾಗಿ ವಚನಗಳ ಮೂಲಕ ಆಡುಭಾಷೆಯಲ್ಲಿ ಜನರಿಗೆ ಅರ್ಥೈಸುವಲ್ಲಿ ಹಾಗೂ ಸಮಾಜದಲ್ಲಿ ಸಮಾನತೆಯನ್ನು ತರಬೇಕು ಎಂಬ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಿದರು. ವಚನ ಸಿದ್ಧಾಂತ ಮುಖಾಂತರ ಸಾಮಾಜಿಕ ಸುಧಾರಣೆ ಮಾಡುವಲ್ಲಿ ಶ್ರಮಿಸಿದವರು ಎಂದರು.

ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಸ್ವಾಗತಿಸಿ, ವಂದಿಸಿದರು.

No comments

Post a Comment