ಮೊಗೇರ ಸೇವಾ ಸಮಾಜದಿಂದ ಯುಗಾದಿ ಹಬ್ಬದ ಸಂಭ್ರಮ

No comments

ಮೊಗೇರ ಸೇವಾ ಸಮಾಜದಿಂದ ಯುಗಾದಿ ಹಬ್ಬದ ಸಂಭ್ರಮ
ಮಡಿಕೇರಿ ಏ.9 : 
ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ ಹಾಗೂ ಕ್ರೀಡಾ ಸಮಿತಿ ವತಿಯಿಂದ ಯುಗಾದಿ ಹಬ್ಬದ ಸಂತೋಷ ಕೂಟ ಕಾರ್ಯಕ್ರಮ ನಗರದಲ್ಲಿ ನಡೆಯಿತು.
  ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಗಾದಿ ಹಬ್ಬದ ಪ್ರಾಮುಖ್ಯತೆ ಮತ್ತು ಮಹತ್ವದ ಕುರಿತು ಮೊಗೇರ ಸಮಾಜದ ಗೌರವಧ್ಯಕ್ಷರಾದ ಪಿ.ಎಂ. ರವಿ ಮಾತನಾಡಿದರು. ಯುಗಾದಿ ಹಬ್ಬವು ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷದ ಪ್ರಾರಂಭದ ದಿನವಾಗಿದೆ. ಇದು ಹಿಂದೂ ಸಂಸ್ಕøತಿಯ ಪ್ರತೀಕÀವಾಗಿದ್ದು, ನಮ್ಮ ಸಂಸ್ಕøತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಿದೆ. ಒಗ್ಗೂಡಿ ಹಬ್ಬಗಳನ್ನು ಆಚರಿಸುವುದರಿಂದ ಸಮಾಜದ ಒಗ್ಗಟ್ಟು ಬಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
  ಮೊಗೇರ ಸಮಾಜ ಸಂಘಟನೆಯ ಬಲವರ್ಧನೆಗೆ ಕೈಜೋಡಿಸುವಂತೆ ಮೊಗೇರ ರವಿ ಕರೆ ನೀಡಿದರು. 
ಸಮಾಜದ ಜಿಲ್ಲಾಧ್ಯಕ್ಷ ಬಿ.ಶಿವಪ್ಪ ಮಾತನಾಡಿ ಮುಂದಿನ ದಿನಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಮಾಜದ ಹಿತದೃಷ್ಟಿಯಿಂದ ಸಂಘನೆಯನ್ನು ಬಲಯುತಗೊಳಿಸಬೇಕೆಂದು ತಿಳಿಸಿದರು.
ಮೊಗೇರ ಸಮಾಜದ ತಾಲ್ಲೂಕು ಅಧ್ಯಕ್ಷ ಪಿ.ಬಿ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ಚಂದ್ರ, ಜಿಲ್ಲಾ ಸಂಚಾಲಕ ಪಿ.ಬಿ.ಜನಾರ್ಧನ, ಹಿರಿಯರಾದ ಪಿ.ಪಿ.ಸೋಮಯ್ಯ, ಮೊಗೇರ ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಮಹೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಪಿ.ಜಿ.ರಮೇಶ್ ನಿರೂಪಿಸಿ, ವಂದಿಸಿದರು. ಬೇವುಬೆಲ್ಲದೊಂದಿಗೆ ಸಮಾಜದ ಬಾಂಧವರು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು

No comments

Post a Comment