ತಾಯಿಯ ಆಶೀರ್ವಾದ ಪಡೆದು ಮತದಾನ ಮಾಡಿದ ಮೋದಿ

No comments

ಅಹಮದಾಬಾದ್‌ :ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡುವ ಮುನ್ನ ತಾಯಿ ಹೀರಾಬೆನ್‌ ಅವರ ಆಶೀರ್ವಾದ ಪಡೆದರು.
ವ್ಯಾಪಕ ಭದ್ರತೆಯೊಂದಿಗೆ ರಾನಿಪ್‌ನ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನೋಡಲು ಸಾವಿರಾರು ಜನರ ಜಮಾವಣೆಗೊಂಡಿದ್ದರು. ವ್ಯಾಪಕ ಭದ್ರತೆ ಕೈಗೊಳ್ಳಲಾಗಿದ್ದು, ಸ್ವಮಲ್ಪ ದೂರ ತೆರದ ವಾಹನದಲ್ಲಿ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಮತಗಟ್ಟೆಯ ಬಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಈ ವೇಳೆ ಅಮಿತ್‌ ಶಾ ಅವರ ಮೊಮ್ಮಗಳನ್ನು ಪ್ರಧಾನಿ ನರೇಂದ್ರ ಮೋದಿ ಮುದ್ದಾಡಿದರು.
ಸಾವಿರಾರು ಅಭಿಮಾನಿಗಳಿಂದ ಮೋದಿ…ಮೋದಿ ಎಂಬ ಜೈಕಾರ ಮೊಳಗಿತು.
ಕುಂಭ ಮೇಳದಲ್ಲಿ ಸ್ನಾನ ಮಾಡಿ ಪವಿತ್ರವಾಗುವ ಅನುಭವದಂತೆ , ಲೋಕತಂತ್ರದ ಪವಿತ್ರ ಕಾರ್ಯ ಮತದಾನ ಮಾಡಿದ ಬಳಿಕ ಆಗಿದೆ ಎಂದು ಪ್ರಧಾನಿ ಹೇಳಿದರು.

No comments

Post a Comment