ದೇಶೀಯ ದ'ಅವಾ: ಬಹು ನಿರೀಕ್ಷೆ ಹುಟ್ಟಿಸಲಿದ್ದಾರೆ ರಬ್ಬಾನಿಗಳು

No comments
ದೇಶೀಯ ದ'ಅವಾ: ಬಹು ನಿರೀಕ್ಷೆ ಹುಟ್ಟಿಸಲಿದ್ದಾರೆ ರಬ್ಬಾನಿಗಳು

ದೇಶೀಯ ನವ ಜಾಗೃತಿ ಮೂಡಿಸುವ ಹಲವು ಕೆಲಸಕಾರ್ಯಗಳನ್ನು ಇಮ್ಮಡಿಗೊಳಿಸಲು ಇನ್ನು ರಬ್ಬಾನಿಗಳು ಕಾರ್ಯಪ್ರವೃತರಾಗಲಿದ್ದಾರೆ.
ಜಾಮಿಯಾ ಮರ್ಕಝ್ ಸೆಂಟರ್ ಓಫ್ ಎಕ್ಸಲೆನ್ಸ್ ಪೂನೂರಿನ ಮರ್ಕಝ್ ಗಾರ್ಡನ್ ನೂರಾನಿ ಒಕ್ಕೂಟ 'ಪ್ರಿಸಂ ಫೌಂಡೇಶನ್' ಆರಂಭಿಸಿದ ಮದೀನತುನ್ನೂರ್ ಫಿನಿಶಿಂಗ್ ಸ್ಕೂಲ್ ಇದರ ಪ್ರಪ್ರಥಮ ಬ್ಯಾಚಿನ ಒಂಬತ್ತು ನವ ರಬ್ಬಾನಿಗಳು ಮೊನ್ನೆ ವಿಶ್ವ ವಿಖ್ಯಾತ ಮರ್ಕಝ್ ಖತ್ಮುಲ್ ಬುಖಾರಿಯಲ್ಲಿ ಇಂಡಿಯನ್‌ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ರಿಂದ ಸನದು ಸ್ವೀಕಾರ ಮಾಡಿದರು‌. ರಾಜಸ್ಥಾನದ ಅಲ್ವರ್ ಸಮೀಪದಲ್ಲಿ ನೆಲೆನಿಂತಿರುವ ತ್ವೈಬಾ ಗಾರ್ಡನ್ ನಲ್ಲಿ ಒಂದು ವರ್ಷದ ಹದೀಸ್ ದೌರ, ಉರ್ದು ಭಾಷಾ ಕಲಿಕೆ, ಹನಫಿ-ಶಾಫಿ ಕರ್ಮಶಾಸ್ತ್ರ ಅಧ್ಯಯನ, ಇಂಗ್ಲೀಷ್ ಭಾಷಾ ಕಲಿಕೆ, ಪ್ರಾಕ್ಟಿಕಲ್ ದ'ಅವಾ ಮುಂತಾದವುಗಳನ್ನು ಪೂರ್ತೀಯಾಗಿಸಿದ ಈ ಒಂಭತ್ತು ಮಂದಿಗೆ ಮರ್ಕಝ್ ಗಾರ್ಡನ್ ನಲ್ಲಿ ಪ್ರತ್ಯೇಕ ತರಬೇತಿಯೂ ಸಿಕ್ಕಿದೆ.

ಉತ್ತರ ಭಾರತದ ವಿಭಿನ್ನ, ವ್ಯತಿರಿಕ್ತ ರಾಜ್ಯಗಳಲ್ಲಿ ಇಸ್ಲಾಮಿನ ಪ್ರಭೋದನೆಗೆ ರಬ್ಬಾನಿಗಳ ಸಾನಿಧ್ಯ ಹೆಚ್ಚು ಶಕ್ತಿ ನೀಡಲಿದೆ ಎಂದು ಮರ್ಕಝ್ ಗಾರ್ಡನ್ ಡೈರೆಕ್ಟರ್ ಡಾ.ಅಬ್ದುಲ್ ಹಕೀಂ ಅಝ್'ಹರಿ ಅಲ್-ಕಂದೀ ಅಭಿಪ್ರಾಯಪಟ್ಟರು. ಬರುವ ವರ್ಷ ಅತಿ ವಿಪುಲವಾದ ಶೈಲಿಯಲ್ಲಿ ನಾಲ್ಕು ಫಿನಿಶಿಂಗ್ ಸ್ಕೂಲ್ ಆರಂಭವಾಗಲಿದೆ. ರಾಜಸ್ಥಾನದ ಅಲ್ವರ್, ಹರಿಯಾಣದ ನೂಹ್, ಉತ್ತರಪ್ರದೇಶದ ಬರೇಲ್ವಿ, ಪಶ್ಮಿಮ ಬಂಗಾಳ ಎಂಬಿತ್ಯಾದಿ ಕಡೆಗಳಲ್ಲಾಗಿದೆ ಸಂಸ್ಥೆಗಳು ಬರುವುದು. ಮುಕ್ತಸರ್ ಕೋರ್ಸ್ ಕಳೆದ ನೂರು ವಿದ್ಯಾರ್ಥಿಗಳಿಗೆ ಆಗಿದೆ ಈ ಬಾರಿ ಅವಕಾಶ. ಕೋರ್ಸ್ ಸೇರಲು ಇಚ್ಛಿಸಿದರೆ ಭರ್ತಿಯಾಗಿಸಿದ ಫೋರಮ್ ನೊಂದಿಗೆ ಇದುವರೆಗೆ ಕಲಿತ ಸಂಸ್ಥೆಯ ಸಾರಥಿಗಳ ಅಥವಾ ಪ್ರಧಾನ ಉಸ್ತಾದರ ಸಾಕ್ಷಿ ಪತ್ರದೊಂದಿಗೆ ಎಪ್ರಿಲ್ 22 ಬೆಳಿಗ್ಗೆ ಒಂಭತ್ತು ಗಂಟೆಗೆ ತಲುಪಬೇಕಾಗಿ ವಿನಂತಿ. ಅಪೇಕ್ಷಣೀಯ ಫೋರಮ್ www.markazgarden.org ಎಂಬ ವೆಬ್ಸೈಟ್ ಓಪನ್ ಮಾಡಿ ಅಲ್ಲಿ ಕಾಣುವ ಮದೀನತುನ್ನೂರ್ ದೌರ ಎಂಬ ಲಿಂಕ್ ನಲ್ಲಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ 9747393190,
8197647847


✍🏻ಅನುವಾದ: ಸಾಲಿಮ್ ಮುಈನಿ ಅಲ್-ರಬ್ಬಾನಿ ಗಂಡಿಬಾಗಿಲು

No comments

Post a Comment