ಉಗ್ರರಿಗೆ ಹಣ ಒದಗಿಸುತ್ತಿದ್ದ ವ್ಯಕ್ತಿ ವಿಮಾನ ಟಿಕೆಟ್ ಮಾಡಿ ಬಂಧನ

No comments

ನವದೆಹಲಿ: ಭಾರತದಲ್ಲಿರುವ ಲಷ್ಕರ್–ಎ–ತಯ್ಯಬಾ (ಎಲ್‌ಇಟಿ) ಉಗ್ರರಿಗೆ ಹಣಕಾಸು ಒದಗಿಸುತ್ತಿದ್ದ ಚಾಣಾಕ್ಷ ಮೊಹಮದ್ ಕಮ್ರನ್‌ನ ಗುರುತು ಪತ್ತೆಹಚ್ಚುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೊನೆಗೂ ಯಶಸ್ವಿಯಾಗಿದೆ. ಇದು ಸಾಧ್ಯವಾಗಿದ್ದು ದುಬೈನ ಎಮಿರೇಟ್ಸ್‌ ಏರ್‌ಲೈನ್ಸ್‌ನ ವೈಮಾನಿಕ ಸಂಚಾರ ಮಾಹಿತಿ ವಿಚಾರಣೆ ಸೇವೆಯಿಂದ (ಐವಿಆರ್‌ಎಸ್‌– ಇಂಟರ‍್ಯಾಕ್ಟೀವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಂ– ವೈಮಾನಿಕ ಮಾಹಿತಿ ವಿಚಾರಣೆ) ಎಂಬುದು ವಿಶೇಷ. ಭಾರತದ ತನಿಖಾ ಸಂಸ್ಥೆಯೊಂದು ಧ್ವನಿ ವಿಚಾರಣೆ ವ್ಯವಸ್ಥೆಯನ್ನು ಉಗ್ರನ ವಿರುದ್ಧ ಸಾಕ್ಷ್ಯವಾಗಿ ಬಳಸಿಕೊಂಡಿದ್ದು ಇದೇ ಮೊದಲು.
ಎಲ್‌ಇಟಿ ಉಗ್ರರಿಗೆ ಹಣಕಾಸು ಒದಗಿಸುವ ಫಲಾಹ್–ಇ–ಇನ್‌ಸಾನಿಯಾತ್ (ಎಫ್‌ಐಎಫ್) ಪ್ರತಿಷ್ಠಾನಕ್ಕಾಗಿ ಅಡಗುತಾಣಗಳು ಮತ್ತು ಪೂರಕ ಸೌಕರ್ಯಗಳನ್ನು ಒದಗಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ದುಬೈ ಮೂಲದ ಕಮ್ರಾನ್, ದೆಹಲಿ ಮೂಲದ ಮೊಹಮದ್ ಸಲ್ಮಾನ್ ಮತ್ತು ರಾಜಸ್ಥಾನ ಮೂಲಕ ಮೊಹಮದ್ ಸಲೀಂ ಅವರ ಮೇಲೆ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ನೆಪ ಮುಂದಿರಿಸಿಕೊಂಡು ಅಡಗುದಾಣಗಳನ್ನು ಸಿದ್ಧಪಡಿಸಲಾಗಿತ್ತು. ದುಬೈನಿಂದ ಭಾರೀ ಮೊತ್ತದ ಹಣ ಮತ್ತು ಅದನ್ನು ಹೇಗೆ ಬಳಸಬೇಕು ಎನ್ನುವ ಸೂಚನೆಗಳನ್ನು ಸ್ವೀಕರಿಸುತ್ತಿದ್ದ ಸಲ್ಮಾನ್ ಮತ್ತು ಸಲೀಂ ಅವರನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

No comments

Post a Comment