ಇನ್ನೂ ಕ್ಷಮೆ ಅನ್ನೋದೇ ಉಳಿದಿಲ್ಲ : ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿ

No comments

ಬೆಂಗಳೂರು: ಐಪಿಎಲ್‌ನ 12 ಅವೃತ್ತಿಯಲ್ಲಿ ಸತತ 6 ಸೋಲು ಕಂಡು ಸಂಕಷ್ಟಕ್ಕೆ ಸಿಲುಕಿರುವ ರಾಯಲ್‌ ಚಾಲೆಂಜರ್‌ ಬೆಂಗಳೂರು (ಆರ್‌ಸಿಬಿ) ನಾಯಕ ವಿರಾಟ್‌ ಕೊಹ್ಲಿ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಇನ್ನು ಕ್ಷಮೆ ಎಂಬುದೇ ನನ್ನ ಬಳಿ ಉಳಿದಿಲ್ಲ,’ ಎಂದಿದ್ದಾರೆ. ದೆಹಲಿ ವಿರುದ್ಧ ಭಾನುವಾರ ತವರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ಗಳಲ್ಲಿ ನೀರಸ ಪ್ರದರ್ಶನ ನೀಡಿ, ತವರು ಅಭಿಮಾನಿಗಳ ಸಮ್ಮುಖದಲ್ಲೇ ಈ ಆವೃತ್ತಿಯ ಆರನೇ ಸೋಲನ್ನು ಅನುಭವಿಸಿತು.
‘ನಾವು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಪ್ರತಿದಿನವೂ ಕ್ಷಮೆ ನೀಡಲು ಸಾಧ್ಯವಿಲ್ಲ. ಈ ದಿನ ನಾವು ಉತ್ತಮವಾಗಿ ಆಡಲಿಲ್ಲ ಎಂಬುದು ಎಂದಿನ ಕತೆಯಂತಾಗಿದೆ. ಇದು ಆರ್‌ಸಿಬಿಯ ಇಡೀ ಐಪಿಎಲ್‌ ಯಾನದ ಕತೆಯೂ ಆಗಿದೆ,’ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.ಇನ್ನು ಭಾನುವಾರದ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಅವರ ಕ್ಯಾಚ್‌ ಡ್ರಾಪ್‌ ಆದ ಬಗ್ಗೆಯೂ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು. ‘4 ರನ್‌ಗಳಿದ್ದಾಗ ಅಯ್ಯರ್‌ ಕ್ಯಾಚ್‌ ಡ್ರಾಪ್‌ ಮಾಡಲಾಯಿತು. ನಂತರ ಅವರು 67ರನ್‌ ಗಳಿಸಿದರು. ಅವಕಾಶಗಳನ್ನು ಯಾರು ಯಾವಾಗ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನಾವು ಹೇಳಲು ಸಾಧ್ಯವೇ ಆಗುವುದಿಲ್ಲ,’ ಎನ್ನುವ ಮೂಲಕ ತಂಡ ಎಚ್ಚರವಾಗಿರಬೇಕು ಎಂಬುದನ್ನು ತಿಳಿಸಿದರು. 

No comments

Post a Comment