ಮಡಿಕೇರಿ : ಪೆರಾಜೆಯ ಪಯಸ್ವಿನಿ ಬಳಗದಿಂದ ದಿ.ಕೇಶವ ಪೆರಾಜೆ ಮಾಸ್ತರ್ ಅವರ ನೆನಪಿನಲ್ಲಿ ಪೆರಾಜೆಯ ಜ್ಯೋತಿ ಪ್ರೌಢಶಾಲೆಯಲ್ಲಿ ಐದು ದಿನಗಳ ಕಾಲ ನಡೆದ ಮೊದಲ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಭಾನುವಾರ ನಡೆಯಿತು.
ಎಪ್ರಿಲ್ 3ರಂದು ಶಿಬಿರವನ್ನು ಉದ್ಘಾಟಿಸಲಾಗಿತ್ತು. 5 ದಿನಗಳ ಕಾಲ ನಡೆದ ಶಿಬಿರದಲ್ಲಿ ಪ್ರತಿ ದಿನ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಗೂ ಮುನ್ನ ಶಿಬಿರದ ಕೊನೆಯ ಕಾರ್ಯಕ್ರಮವಾಗಿ ಹಾವು-ನಾವು-ಪರಿಸರ ಎಂಬ ವಿಷಯದ ಕುರಿತಾಗಿ ಉರಗ ತಜ್ಞ ರವೀಂದ್ರನಾಥ ಐತಾಳರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಪೋಷಕರು ಸಹ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿದ್ದರು.
ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ಎನ್.ಎಂ.ಸಿ ಕಾಲೇಜಿನ ಉಪನ್ಯಾಸಕಿಯಾದ ಡಾ.ಅನುರಾಧ ಕುರುಂಜಿ ಮಾತನಾಡಿ ಇಂದಿನ ದಿನಗಳಲ್ಲಿ ಬೇಸಿಗೆ ಶಿಬಿರಗಳು ಹಣ ಮಾಡುವ ದಾರಿಯಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೆ ಪಯಸ್ವಿನಿ ಬಳಗ ಪೆರಾಜೆ ವತಿಯಿಂದ ನಡೆಯುತ್ತಿರುವ ಈ ಉಚಿತ ಮತ್ತು ನಿಸ್ವಾರ್ಥಸೇವೆಯು ತುಂಬಾ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಮಕ್ಕಳು ಇಂದಿನ ದಿನಗಳಲ್ಲಿ ಯಾಂತ್ರಿಕ ಶಿಕ್ಷಣದಿಂದಾಗಿ ಮಾನವೀಯತೆಯನ್ನು ಮರೆಯುತ್ತಿರುವುದು ತುಂಬಾ ಆತಂಕದ ವಿಷಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪಯಸ್ವಿನಿ ಬಳಗ ಪರಾಜೆಯ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಗೌರವ ಸಲಹೆಗಾರರಾದ ಡಾ.ಮಾಧವ ಪೆರಾಜೆ , ಜ್ಯೋತಿ ಪ್ರೌಢಶಾಲೆಯ ಅಧ್ಯಾಪಕರಾದ ಚಂದ್ರಮತಿ ಹಾಗೂ ಮೋಹನಾಂಗಿ ಹಾಗೂ ಪೆರಾಜೆ ಪಂಚಾಯತಿಯ ಅಧ್ಯಕ್ಷರಾದ ಜಯಲಕ್ಷ್ಮಿ ಧರಣೀದರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಧಾಮ ಪೆರಾಜೆ ಕಾರ್ಯಕ್ರಮವನ್ನು ನಿರೂಪಿಸಿದರೆ, ದರ್ಶನ್ ವಂದಿಸಿದರು.

No comments
Post a Comment