ನವದೆಹಲಿ, ಏಪ್ರಿಲ್ 19: ದೇಶದ ಅತಿ ದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಆರ್ಥಿಕ ಸಂಕಷ್ಟದಿಂದ ಸದ್ಯಕ್ಕೆ ತನ್ನ ಸಂಪೂರ್ಣ ಹಾರಾಟ ಸ್ಥಗಿತಗೊಳಿಸಿದೆ. ಬಾಕಿ ಇರುವ ಸಾಲ ಮತ್ತು ಸಿಬ್ಬಂದಿ ವೇತನ ಬಾಕಿ ಉಳಿಸಿಕೊಂಡಿರುವ ಸಂಸ್ಥೆ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಮೂರು ನಾಲ್ಕು ತಿಂಗಳಿನಿಂದ ಸಂಬಳ ವಿಲ್ಲದೆ, ಈಗ ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಅದರ ಉದ್ಯೋಗಿಗಳು ತಲುಪಿದ್ದಾರೆ.ಹೀಗೆ ಕಂಗಾಲಾಗಿರುವ ಜೆಟ್ ಏರ್‌ವೇಸ್‌ನ ಸಾವಿರಾರು ಉದ್ಯೋಗಿಗಳಲ್ಲಿ ಸಣ್ಣನೆಯ ಆಶಾಕಿರಣ ಮೂಡಿದೆ.
ಒಂದೆಡೆ ಅಧಿಕ ನಿರ್ವಹಣಾ ವೆಚ್ಚದಿಂದ ವಿಮಾನ ಸಂಸ್ಥೆಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದರೆ, ಸ್ಪೈಸ್ ಜೆಟ್ ತನ್ನ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಜತೆಗೆ ಜೆಟ್ ಏರ್‌ವೇಸ್‌ನ ಬಡಪಾಯಿ ಉದ್ಯೋಗಿಗಳೆಡೆಗೆ ತನ್ನ ಸಹಾಯ ಹಸ್ತವನ್ನೂ ಚಾಚಿದೆ.

No comments
Post a Comment