ಮೊಬೈಲ್ ಸ್ಪೋಟ : ಯುವಕನ ಕಾಲಿಗೆ ತೀವ್ರಗಾಯ

No comments

ಕೋಲಾರ : ಮತದಾನ ಮಾಡಲು ತೆರಳುತ್ತಿದ್ದ ವೇಳೆ ಹೊಸ ಮೊಬೈಲ್‌ ಸ್ಪೋಟಗೊಂಡು ಯುವಕನೊಬ್ಬನ ಎಡಗಾಲಿಗೆ ತೀವ್ರಗಾಯಗಳಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೊತ್ತಪೇಟೆಯ ವಾಸಿ ಕೆ.ಆರ್‌.ಗಂಗಾಧರ್‌ (25) ಏ.18ರಂದು ಮತ ಚಲಾಯಿಸಲು ದ್ವಿಚಕ್ರ ವಾಹನದಲ್ಲಿ ಹೊಸಕೋಟೆ-ಚಿಂತಾಮಣಿ ರಸ್ತೆಯ ತರಬಹಳ್ಳಿ ಗೇಟ್‌ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಪ್ಯಾಂಟಿನ ಎಡಜೇಬಿನಲ್ಲಿ ಇಟ್ಟಿದ್ದ. ಏ.17ರಂದು ಖರೀದಿಸಿದ್ದ ಪ್ರಖ್ಯಾತ ಸಂಸ್ಥೆಯ ಮೊಬೈಲ್‌ನಿಂದ ಹೊಗೆ ಬರುತ್ತಿರುವುದು ಕಂಡುಬಂದಿದ್ದು ಕೂಡಲೇ ವಾಹನವನ್ನು ನಿಲ್ಲಿಸಲೆತ್ನಿಸಿದ್ದಾನೆ.ಅಷ್ಟರಲ್ಲಿ ಸ್ಪೋಟಗೊಂಡಿದೆ.
                       ad   
 ಯುವಕನು ಹೊಸಕೋಟೆಯ ಅಂಬೇಡ್ಕರ್‌ ಕಾಲೋನಿಯ ಅಕ್ಕನ ಮನೆಯಲ್ಲಿ ವಾಸಿಸುತ್ತಿದ್ದು ನಗರದ ಬಜಾಜ್‌ ಶೋರೂಂನಲ್ಲಿ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದಾನೆ.ಸ್ಪೋಟದಿಂದಾಗಿ ತೊಡೆಯಿಂದ  ಎಡಗಾಲಿನ ಬಹುತೇಕ ಭಾಗ ಛಿದ್ರಗೊಂಡಿದ್ದು, ನಗರದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಸಲಾಗಿದೆ. ಹಾನಿಯು ತೀವ್ರ ಸ್ವರೂಪದ್ದಾಗಿದ್ದು ಸಂಪೂರ್ಣ ಗುಣಮುಖರಾಗಲು ಕನಿಷ್ಠ 3 ತಿಂಗಳ ಸಮಯ ಬೇಕಾಗುತ್ತದೆ ಎಂದು ವೈದ್ಯ ಡಾ ನಾಗರಾಜ್‌ ತಿಳಿಸಿದ್ದಾರೆ. ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

No comments

Post a Comment