ಕನ್ನಡ ರಿಪೋರ್ಟರ್ ಚುನಾವಣಾ ಪೂರ್ವ ಸಮೀಕ್ಷೆ

No comments

*ಕನ್ನಡ ರಿಪೋರ್ಟರ್ ಚುನಾವಣಾ ಪೂರ್ವ ಸಮೀಕ್ಷೆ: ಪ್ರತಾಪ್ ಸಿಂಹ ವಿರುಧ್ದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ಗೆ ಗೆಲುವು.* *ಮೈತ್ರಿ ಅಭ್ಯರ್ಥಿಗೆ ಜೆಡಿ ಎಸ್ ಕೈಕೊಡುವ ಸಾಧ್ಯತೆ?* *ಮೈಸೂರಿನಲ್ಲಿ ಜೆಡಿಎಸ್ ಕಾಂಗ್ರೆಸ್ಗೆ ಕೈ ಕೊಟ್ಟರೆ ಮಂಡ್ಯದಲ್ಲಿ ಜೆಡಿಎಸ್ ಠುಸ್?* *ಮೈಸೂರಿನಲ್ಲಿ ವಿಜಯಶಂಕರ್ ಸೋತರೆ* *ಮೈತ್ರಿ ಸರ್ಕಾರ ಪತನ*? *ಕನ್ನಡ ರಿಪೋರ್ಟರ್ ಸಮೀಕ್ಷೆ* ಕೊಡಗು:ರಾಜ್ಯದ ಹೈವೋಲ್ಟೇಜ್ ಕ್ಷೇತ್ರದಲೊಂದಾದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರದ ಹಾಲಿ ಸಂಸದರಾದ ಪ್ರತಾಪ್ ಸಿಂಹ ಹಾಗೂ ಮೈತ್ರಿ ಅಭ್ಯರ್ಥಿಯಾದ ವಿಜಯಶಂಕರ್ ನಡುವೆ ನೇರನೇರಾ ಹಣಾಹಣಿ ಏರ್ಪಟ್ಟಿದೆ. ಕೊಡಗು -ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕನ್ನಡ ರಿಪೋರ್ಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಗೆ ಅಭೂತಪೂರ್ವ ಸ್ಪಂದನೆ ದೊರಕಿದೆ. ಕನ್ನಡ ರಿಪೋರ್ಟರ್ ನಡೆಸಿದ ಸಮೀಕ್ಷೆಯಲ್ಲಿ ಕ್ಷೇತ್ರದ ಪ್ರಮುಖ ವಿಷಯಗಳನ್ನು ಮುಂದಿಟ್ಟು ಜನರ ಬಳಿ ಪ್ರಶ್ನೆಯನ್ನು ಕೇಳಿದ್ದರು. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರದಲ್ಲಿ ಒಂದೊಂದು ಕ್ಷೇತ್ರದಲ್ಲಿ ೧೦೦೦ ಜನರನ್ನು ಆಯ್ಕೆ ಮಾಡಿ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಸಮೀಕ್ಷೆಯಲ್ಲಿ ಒಟ್ಟು ಎಂಟು ಸಾವಿರ ಜನ ಪಾಲ್ಗೊಂಡಿದ್ದರು. ಸಮೀಕ್ಷೆಯಲ್ಲಿ ಶೇಕಡಾ ೫೫% ರಷ್ಟು ಜನ ವಿಜಯಶಂಕರ್ ಪರವಾಗಿ ಮತ ಚಲಾಯಿಸಿದರೆ, ಪ್ರತಾಪ್ ಸಿಂಹ ಪರವಾಗಿ ಶೇ ೪೫% ರಷ್ಟು ಜನ ಮತವನ್ನು ಚಲಾಯಿಸಿದ್ದಾರೆ. ಕೊಡಗು ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಮುನ್ನಡೆ ಸಾಧಿಸಲಿದ್ದಾರೆ. ವಿಜಯಶಂಕರ್ ಚಾಮುಂಡೇಶ್ವರಿ ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ ಅತೀ ಹೆಚ್ಚು ಮತವನ್ನು ಪಡೆಯಲಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಅಲ್ಲದೇ ಪ್ರತಾಪ್ ಸಿಂಹ ಅವರು ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರದಲ್ಲಿ ಅಲ್ಪ ಮತಗಳ ಅಂತರದಿಂದ ಮುನ್ನಡೆ ಸಾಧಿಸಲಿದ್ದು, ವಿಜಯಶಂಕರ್ ಹುಣಸೂರು ಹಾಗೂ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲಿದ್ದಾರೆ ಎಂಬುದು ಕನ್ನಡ ರಿಪೋರ್ಟರ್ ಸಮೀಕ್ಷೆಯಲ್ಲಿ ತಿಳಿದಿದೆ. ಇದು ಬರೀ ಚುನಾವಣಾ ಪೂರ್ವ ಸಮೀಕ್ಷೆಯಾಗಿದ್ದು, ಎಲ್ಲದಕ್ಕೂ ಮತದಾರ ಏಪ್ರಿಲ್ ೧೮ ರಂದು ನಡೆಯುವ ಚುನಾವಣೆಯಲ್ಲಿ ನಿರ್ಧಾರ ಮಾಡಲಿದ್ದಾನೆ...

No comments

Post a Comment