ವರದಿ: ಕೆ ಎಂ ಇಸ್ಮಾಯಿಲ್ ಕಂಡಕ್ಕರೆ
ಮಡಿಕೇರಿ:ಕಾಡಂಚಿನಲ್ಲಿ ವಾಸವಿರುವ ದೊಡ್ಡ ಹಡ್ಲು ಹಾಡಿಯಲ್ಲಿ ರಸ್ತೆ, ನೀರು, ಮನೆ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ಬದುಕು ಸಾಗಿಸುತ್ತಿದ್ದು.
ಹಾಡಿಯ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಹಾಡಿಯ ನಿವಾಸಿಗಳು ಎಚ್ಚರಿಸಿದ್ದಾರೆ.
ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹಡ್ಲು ಹಾಡಿಯಲ್ಲಿ ಸುಮಾರು ನಲವತ್ತು ಹೆಚ್ಚು ಕುಟುಂಬಗಳು ವಾಸವಾಗಿದ್ದು ಹಲವು ಮಂದಿಗೆ ಹಕ್ಕುಪತ್ರ ನೀಡಲಾಗಿದ್ದರು ಮನೆ, ರಸ್ತೆ ,ಕುಡಿಯುವ ನೀರು ಸೇರಿದಂತೆ ಮೂಲ ಸಮಸ್ಯೆಗಳಿದ್ದು ಶಾಶ್ವತವಾಗಿ ಬಗೆಹರಿಸುವಲ್ಲಿ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಹಾಡಿಯ ನಿವಾಸಿಗಳು ಆರೋಪಿಸಿದ್ದಾರೆ.
ಕಳೆದ ಐವತ್ತು ವರ್ಷಗಳಿಂದಲೂ ನೆಲೆ ಊರಿರುವ ಆದಿವಾಸಿಗಳು ಹಾಗೂ ಇತರ ಪಾರಂಪರಿಕ ಅರಣ್ಯ ವಾಸಿಗಳು ಗುಡಿಸಲು ಮನೆಗಳನ್ನು ಕಟ್ಟಿ ಬದುಕು ಸಾಗಿಸುತ್ತಿದ್ದು ಯಾವುದೇ ಶಾಶ್ವತ ಯೋಜನೆಗಳಿಲ್ಲದೇ ಜೀವನ ನಡೆಸುತ್ತಿದ್ದಾರೆ
ಕಳೆದ ಹಲವು ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಇದ್ದ ಸಂದರ್ಭದಲ್ಲಿ ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನದಿಂದ ಕುಡಿಯುವ ನೀರಿಗೆ ಗೇಟ್‍ಹಾಡಿಯಿಂದ ಎರಡು ಕಿಲೋಮೀಟರ್ ದೂರಕ್ಕೆ ಪೈಪ್ ಲೈನ್ ಅಳವಡಿಸಲಾಗಿತ್ತಾದರೂ ಇದುವರೆಗೂ ಕುಡಿಯುವ ನೀರೇ ಬರಲೇ ಇಲ.್ಲ
ಕುಡಿಯುವ ನೀರಿಗೆ ಹಲವು ಹೋರಾಟಗಳ ನಂತರ ಪಂಚಾಯಿತಿಯಿಂದ 5 ಬಾವಿಗಳನ್ನು ತೋಡ ಲಾಗಿತ್ತಾದರೂ ಜನರಿಗೆ ಬೇಕಾದಷ್ಟು ನೀರು ಇರೋದಿಲ್ಲ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ತೋಡು ನೀರನ್ನು ಅವಲಂಬಿತರಾಗುತ್ತಿದ್ದೇವೆ ಎಂದು ಹಾಡಿಯ ನಿವಾಸಿ ಉಮೇಶ್ ತಿಳಿಸಿದ್ದಾರೆ.
ಹಾಡಿಯಿಂದ ಕಿಲೋಮೀಟರ್ ದೂರದವರೆಗೆ ಕಾಲ್ನಡಿಗೆಯಲ್ಲಿ ನಡೆದು ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಇಂದಿಗೂ ರಸ್ತೆ ಅಭಿವೃದ್ಧಿ ಕಾಣದೇ
ವಾಹನ ಸಂಚಾರವೂ ಇಲ್ಲದೇ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಹೊತ್ತು ಸಾಗಬೇಕಾಗಿದೆ
ಮಳೆಗಾಲ ಸಂದರ್ಭದಲ್ಲೂ ಕಾಲುದಾರಿಯಲ್ಲಿ ಕೆಸರು ಮಯವಾಗಿರುವ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಹೆಗಲ ಮೇಲೆ ಹೊತ್ತು ಸಾಗಬೇಕಾಗಿದೆ
ಕಾಡು ಪ್ರಾಣಿಗಳ ಭಯದ ನಡುವೆಯೂ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದೇವೆ
ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಬೇಕೆಂದು ಹಲವು ಬಾರಿ ಮನವಿ ಮಾಡಿದರು ಯಾರು ಹಾಡಿಯ ಕಡೆಗೆ ಮುಖಮಾಡಿಲ್ಲ. ಇದೀಗ ಗ್ರಾಮ ಪಂಚಾಯಿತಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತಿದ್ದು ಸ್ಥಳೀಯ ಪಂಚಾಯಿತಿ ಸದಸ್ಯರೊಬ್ಬರು ಅಡ್ಡಿಪಡಿಸುತ್ತಿದ್ದಾರೆ ಎಂದು ಹಾಡಿಯ ನಿವಾಸಿ ಪದ್ಮ ಆರೋಪಿಸಿದರು
ಕೂಡಲೇ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ರಸ್ತೆ ಅಗಲೀಕರಣಗೊಳಿಸಿ ವಾಹನ ಸಂಚಾರದ ರಸ್ತೆಯನ್ನಾಗಿ ಮಾಡಬೇಕು.ಸೂಕ್ತ ಮನೆಗಳಿಲ್ಲದೆ ಗುಡಿಸಲು ಮನೆಗಳಲ್ಲಿ ವಾಸವಾಗಿದ್ದು ವಿದ್ಯುತ್ ಸಂಪರ್ಕಕ್ಕೆ ಕಂಬಗಳನ್ನು ಅಳವಡಿಸಲಾಗಿದೆ ಕೂಡಲೇ ಕರೆಂಟ್ ಹಾಗೂ ಶಾಶ್ವತ ಕುಡಿವ ನೀರಿನ ಯೋಜನೆಯನ್ನು ಹಾಡಿಯಲ್ಲಿ ಮಾಡಬೇಕೆಂದು ಹಾಡಿಯ ಮಹಿಳೆ ಮೇರಿ ಒತ್ತಾಯಿಸಿದರು
ಹಾಡಿಯಲ್ಲಿ ಮೂಲಸೌಕರ್ಯಗಳ ಸಮಸ್ಯೆಗಳಿದ್ದರೂ ಚುನಾವಣೆ ಸಂದರ್ಭದಲ್ಲಿ ಮಾತ್ರ ಅಧಿಕಾರಿಗಳು ಜನಪ್ರತಿನಿಧಿಗಳು ಕಾಣಿಸಿಕೊಳ್ಳುತ್ತಾರೆ ಮತ್ತೆ ಇತ್ತ ಕಡೆ ತಿರುಗಿಯೂ ನೋಡಲ್ಲ ಹಾಡಿಯ ಸಮಸ್ಯೆ ಬಗೆಹರಿಸದಿದ್ದಲ್ಲಿ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹಾಡಿಯ ನಿವಾಸಿಗಳು ಎಚ್ಚರಿಸಿದ್ದಾರೆ
ಈ ಸಂದರ್ಭರಾಜು,ಪ್ರಕಾಶ್ ,.ಕ್ರಿಷ್ಣ ,ಬಸಪ್ಪ, ದಿನೇಶ್ , ಜಯ,ಆಶಾ,ಇಂದೀರಾ, ವಿನ್ಸಿ ,ರಜಿ, ರೇಖಾ ,ಚಂದ್ರ ವತಿ, ಉಶಾ ಸೇರಿದಂತೆ ಮತ್ತಿತರರು ಹಾಜರಿದ್ದರು.
ಚಿತ್ರ ಎಂ ಡಿ ಕೆ 27 ಎಸ್ ಡಿ ಆರ್ 1 ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹಡ್ಲು ಹಾಡಿಯಲ್ಲಿ ಮೂಲಮ ಸೌಕರ್ಯ ಕೊರತೆ ಪ್ರತಿಭಟನೆ ಎಚ್ಚರಿಕೆ ಗ್ರಾಮಸ್ಥರು
ಚಿತ್ರ ಎಂ ಡಿ ಕೆ 27 ಎಸ್ ಡಿ ಆರ್ 2 ಹಾಡಿಯಲ್ಲಿ ಸೂಕ್ತ ರಸ್ತೆ ಇಲ್ಲದೆ ನಡೆದು ಸಾಗುತ್ತಿರುವ ಶಾಲಾ ವಿಧ್ಯಾರ್ಥಿಗಳು
ಚಿತ್ರ ಎಂ ಡಿ ಕೆ27 ಎಸ್ ಡಿ ಆರ್ 3 ಹಾಡಿಯಲ್ಲಿರುವ ಮನೆ
EXCLUSIVE REPORT |



No comments
Post a Comment