ಗಾಯಗೊಂಡ ಪತ್ರಕರ್ತನನ್ನು ಆಸ್ಪತ್ರೆಗೆ ದಾಖಲಿಸಿದ ರಾಹುಲ್ ಗಾಂಧಿ

No comments

ದೆಹಲಿ : (ಮಾರ್ಚ್ 27)  ದೆಹಲಿಯಲ್ಲಿ ಅಪಘಾತಕ್ಕೀಡಾದ  ಪತ್ರಕರ್ತರೊಬ್ಬರು ನೆರವಿಗೆ ದಾವಿಸಿದ ರಾಹುಲ್ ಗಾಂಧಿ ತನ್ನ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದೊಯ್ದು  ಘಟನೆ ಇಂದು ಮಧ್ಯಾಹ್ನ ನಡೆದಿದೆ.
     ದಿಲ್ಲಿಯ ಹುಮಾಯೂನ್ ರಸ್ತೆಯಲ್ಲಿ ಅಪಘಾತಕ್ಕೀಡಾದ ರಾಜಸ್ಥಾನ್ ನ ದಿನಪತ್ರಿಕೆಯೊಂದರ ಪತ್ರಕರ್ತರಾದ ರಾಜೇಂದ್ರ ವ್ಯಾಸ್ ,  ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಾಹುಲ್ ಗಾಂಧಿ ತಮ್ಮ ವಾಹನ ನಿಲ್ಲಿಸಿ, ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
   ರಾಹುಲ್ ಗಾಂಧಿಯವರ ಸಿಬ್ಬಂದಿ ಸೆರೆ ಹಿಡಿದಿರುವ ವೀಡಿಯೋದಲ್ಲಿ " ಸರ್  ದಯಮಾಡಿ ನನ್ನ ಹಣೆಯನ್ನು ಇನ್ನೊಮ್ಮೆ  ಒರೆಸಿ, ಈ ವಿಡಿಯೋವನ್ನು ನನ್ನ ಕೆಲಸಕ್ಕೆ ಬಳಸಿಕೊಳ್ಳುತ್ತೇನೆ " ಎಂದು ಹೇಳುವುದು ಕೇಳಿಸುತ್ತಿದೆ.

No comments

Post a Comment