ಸಚಿವ ಪುಟ್ಟರಾಜು ಮನೆಗೆ ಐಟಿ ದಾಳಿ : ರೇವಣ್ಣ ಆಪ್ತರಿಗೆ ಐಟಿ ಶಾಕ್

No comments

ಮಂಡ್ಯ : ಸಣ್ಣ ನೀರಾವರಿ ಸಚಿವ ಸಿ ಎಚ್ ಪುಟ್ಟರಾಜು ಅವರ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು  ಚಿನಕುರಳಿಯಲ್ಲಿರುವ ಮನೆಗೆ ಮುಂಜಾನೆ 5:30 ಕ್ಕೆ ಐಟಿ ದಾಳಿ ಮಾಡಿದೆ. 3 ಕಾರುಗಳಲ್ಲಿ ಸಿಆರ್ ಪಿ ಎಫ್ ಭದ್ರತೆಯಿರುವ ಅಧಿಕಾರಿಗಳು ದಾಳಿ ಮಾಡಿದ್ದಾರೆ.
  
ಇದರ ಕುರಿತು ಹೇಳಿರುವ ಸಚಿವ ಪುಟ್ಟರಾಜು " ಇದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೊಟ್ಟ ದೂರಿನಿಂದ ಈ ದಾಳಿ ನಡೆದಿದೆ " ಹೇಳಿದ್ದಾರೆ. ಆದರೆ ಯಾರು ಎಂದು ಹೆಸರು ಹೇಳಿಲ್ಲ.ಇದು ರಾಜಕೀಯ ಪ್ರೇರಿತ ಕೈವಾಡ ಎಂದು ಆರೋಪಿಸಿದ್ದಾರೆ.
ಇನ್ನು ಹಾಸನದಲ್ಲಿ ರೇವಣ್ಣ ಆಪ್ತರ ಮನೆ ಮೇಲೆ ಐಟಿ ದಾಳಿಯಾಗಿದೆ ಎಂಬ ಮಾಹಿತಿ ತಿಳಿದುಬರುತ್ತಿದೆ. ಮೊನ್ನೆಯಷ್ಟೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು " ಕಾಂಗ್ರೆಸ್ ಜೆಡಿಎಸ್ ನಾಯಕರ ಮನೆಗೆ ಐಟಿದಾಳಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.

No comments

Post a Comment